ಚೆಟ್ಟಳ್ಳಿ ಹಾಗೂ ಕಂಡಕರೆಯಲ್ಲಿ ಕೊರೊನಾ ಪಾಸಿಟಿವ್ : ಎರಡು ಪ್ರದೇಶಗಳು ಸೀಲ್ ಡೌನ್

July 15, 2020

ಮಡಿಕೇರಿ ಜು. 14 : ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದ ಹಿನ್ನೆಲೆ ಚೆಟ್ಟಳ್ಳಿ ಹಾಗೂ ಕಂಡಕರೆ ದೇಶಗಳುಗಳನ್ನು ಸೀಲ್ ಡೌನ್ ಮಾಡಲಾಗಿದೆ.

ಚೆಟ್ಟಳ್ಳಿಯ ಪುತ್ತರಿರ ಮನೆ‌ ರಸ್ತೆಯಲ್ಲಿ ವಾಸಿಸುತ್ತಿರುವ 62 ವರ್ಷ ಪ್ರಾಯದ , ಜ್ವರ ಲಕ್ಷಣವಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.
ಹಾಗೂ ಆರೋಗ್ಯಕಾರ್ಯಕರ್ತೆಯ ಕಂಡಕರೆಯ 16 ವರ್ಷದ ಬಾಲಕನಿಗೂ ಸೋಂಕು ತುಗುಲಿರುವುದು ಧೃಡಪಟ್ಟಿದ್ದು.
ಸೋಂಕು ಧೃಡಪಟ್ಟ ಚೆಟ್ಟಳ್ಳಿಯ 62 ವರ್ಷದ ವ್ಯಕ್ತಿ ಹಾಗೂ ಕಂಡಕರೆಯ 16 ವರ್ಷದ ಬಾಲಕನ ಮನೆಯ 100 ಮೀಟರ್ ಸುತ್ತ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.
ಕಂಡಕರೆಯ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯಲ್ಲಿ 17 ಮನೆಗಳು ಇದ್ದು ಒಟ್ಟು 67 ಜನರು ವಾಸಿಸುತ್ತಿದ್ದಾರೆ.