ಸೀಲ್ ಡೌನ್ ಪ್ರದೇಶದಿಂದ ಹೊರಬಂದರೆ ಕಟ್ಟುನಿಟ್ಟಿನ‌ ಕ್ರಮ : ತಹಶೀಲ್ದಾರ್ ಗೋವಿಂದ ರಾಜು ಎಚ್ಚರಿಕೆ

15/07/2020

ಮಡಿಕೇರಿ ಜು. 14 : ಚೆಟ್ಟಳ್ಳಿ ಗ್ರಾಮ ಪಂಚಾಯತಿಯಲ್ಲಿ ಎರಡು ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಚೆಟ್ಟಳ್ಳಿ ಹಾಗೂ ಕಂಡಕರೆಯ ಒಂದು ಪ್ರದೇಶ‌ ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡುತ್ತದೆ. 14 ದಿನಗಳ ಕಾಲ ಈ ಪ್ರದೇಶವು ಸೀಲ್ ಡೌನ್ ಆಗಿರುತ್ತದೆ. ಆದ್ದರಿಂದ ಸೀಲ್ ಡೌನ್ ಪ್ರದೇಶದ ಜನರು ಹೊರಬಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದೆಂದು ತಹಶೀಲ್ದಾರ್ ಗೋವಿಂದ ರಾಜು ಎಚ್ಚರಿಕೆ ನೀಡಿದ್ದಾರೆ.
ಕಂಟೈನ್ಮೆಂಟ್ ಝೋನ್ ವ್ಯಾಪ್ತಿಯ ನಿವಾಸಿಗಳು ಯಾರು ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ಕೊರೋನಾ ಸೋಂಕನ್ನು ತಡೆಗಟ್ಟಲು ಎಲ್ಲರೂ ಸಹಕರಿಸುವಂತೆ ಕಂಟೈನ್ಮೆಂಟ್ ಝೋನ್ ಗೆ ಭೇಟಿ ನೀಡಿ ತಹಶೀಲ್ದಾರ್ ಗೋವಿಂದ ರಾಜು ಹೇಳಿದರು.