ನೋವಿನಲ್ಲೂ ಶೇ.92 ಅಂಕ ಗಳಿಸಿದ ಪ್ರಕೃತಿ

15/07/2020

ಮಡಿಕೇರಿ ಜು. 14 : ಕಳೆದ ಸೆಪ್ಟೆಂಬರ್‍ನಲ್ಲಿ ಸುಳ್ಯದ ಬಳಿ ನಡೆದ ಕಾರು ಅಪಘಾತದಲ್ಲಿ ಇಡೀ ಕುಟುಂಬದವರನ್ನು ಕಳೆದುಕೊಂಡ ವಿದ್ಯಾರ್ಥಿನಿ ಪ್ರಕೃತಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 92 ಅಂಕಗಳಿಸಿದ್ದಾಳೆ.
ಸುಂಟಿಕೊಪ್ಪ ನಿವಾಸಿಯಾದ ಅಂಚೆ ಇಲಾಖೆಯ ಅಧಿಕಾರಿ ನಿಡ್ಯಮಲೆ ಆಶೋಕ ಹಾಗೂ ಅವರ ಪತ್ನಿ ಶಿಕ್ಷಕಿ ಹೇಮಾವತಿ, ಪುತ್ರಿ ಹಾಗೂ ಓರ್ವ ಪುತ್ರ ಸುಳ್ಯದ ಬಳಿ ಅಪಘಾತದಲ್ಲಿ ಮರಣಹೊಂದಿದ್ದರು. ಇವರ ಇನ್ನೋರ್ವ ಪುತ್ರಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಈಕೆಯನ್ನು ನೋಡಲು ತಂದೆ, ತಾಯಿ, ಸಹೋದರ ಮತ್ತು ಸಹೋದರಿ ಕಾರಿನಲ್ಲಿ ತೆರಳಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿತ್ತು.
ಇದೀಗ ಈಕೆ ನೋವಿನಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕ ಗಳಿಸಿ ಕಾಲೇಜಿಗೆ ಮತ್ತು ಸುಂಟಿಕೊಪ್ಪಕ್ಕೆ ಕೀರ್ತಿ ತಂದಿದ್ದಾಳೆ.