ಸುಂಟಿಕೊಪ್ಪ ಸಂತಮೇರಿ ಪದವಿ ಪೂರ್ವ ಕಾಲೇಜಿಗೆ ಶೇ. 100 ಫಲಿತಾಂಶ

15/07/2020

ಮಡಿಕೇರಿ ಜು.15 : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಸುಂಟಿಕೊಪ್ಪದ ಸಂತಮೇರಿ ಪದವಿ ಪೂರ್ವಕಾಲೇಜಿಗೆ ಶೇ. 100 ಫಲಿತಾಂಶ ದೊರೆತ್ತಿದೆ.
ಕಾಲೇಜಿನ ವಿದ್ಯಾರ್ಥಿ ಎಸ್.ಎಂ. ಶಾಜಿದ ಶೇಕಡ 92.83 ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಡಿಕ್ಟೇಷನ್‍ನಲ್ಲಿ 06 ಪ್ರಥಮ ದರ್ಜೆಯಲ್ಲಿ 12, ದ್ವಿತೀಯ ದರ್ಜೆಯಲ್ಲಿ 4 ಮಂದಿ ತೇರ್ಗಡೆಗೊಂಡಿದ್ದಾರೆ.
ಸುಂಟಿಕೊಪ್ಪ ಸರಕಾರಿ 59.11 ಫಲಿತಾಂಶ ಲಭ್ಯವಾಗಿದೆ ವಿಜ್ಞಾನದಲ್ಲಿ 11 ಮಂದಿ ಪರೀಕ್ಷೆಗೆ ಹಾಜರಾಗಿದ್ದು 9 ಮಂದಿ ತೇರ್ಗಡೆಗೊಂಡಿದ್ದು ಶೇಕಡ 81.81% ಪಡೆದುಕೊಂಡಿದೆ.ವಾಣಿಜ್ಯ ವಿಭಾಗದಲ್ಲಿ 24 ಮಂದಿ ಹಾಜರಾಗಿದ್ದು 17 ಮಂದಿ ತೇರ್ಗಡೆಗೊಂಡು ಶೇಕಡ 70.83% ಲಭ್ಯವಾಗಿದೆ. ಸೌಂದರ್ಯ ಎನ್.ಎನ್ 554 ಅಂಕ ಶೇಕಡ 83.33 ಪಡೆದುಕೊಂಡು ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಕಲಾ ವಿಭಾಗದಲ್ಲಿ 26 ಮಂದಿ ಪರೀಕ್ಷೆಗೆ ಕುಳಿತ್ತಿದ್ದು 10 ಮಂದಿ ತೇರ್ಗಡೆಗೊಂಡಿದ್ದು 38.46% ಪಡೆದುಕೊಳ್ಳುವ ಮೂಲಕ ಒಟ್ಟಾರೆ ಕಾಲೇಜಿ 59.11% ಶೇಕಡ ದೊರೆತ್ತಿದೆ.
ಮಾದಾಪುರ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಶೇಕಡ 88.33% ವಾಣಿಜ್ಯ ವಿಭಾಗದಲ್ಲಿ ಕಲಾವಿಭಾಗದಲ್ಲಿ 87.5% ಶೇಕಡ ಪಡೆದುಕೊಂಡಿದೆ ಕಾಲೇಜಿನ ನಿಸರ್ಗ ಪಿ.ಬಿ. ವಾಣಿಜ್ಯ ವಿಭಾಗದಲ್ಲಿ 560 ಅಂಕ 93.33% ಶೇಕಡ ಪಡೆದು ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಒಟ್ಟು 108ಮಂದಿ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು 95 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ.