ಸಿದ್ದಾಪುರದಲ್ಲಿ ಬೆಳಗ್ಗೆ 6 ಗಂಟೆಯಿಂದ 2 ಗಂಟೆವರೆಗೆ ವ್ಯಾಪಾರ ವಹಿವಾಟು : ವರ್ತಕರ ಸಂಘದ ಸಭೆಯಲ್ಲಿ ನಿರ್ಧಾರ

15/07/2020

ಮಡಿಕೇರಿ ಜು. 15 : ಸಿದ್ದಾಪುರ ಸೇರಿದಂತೆಜಿಲ್ಲೆಯ ಹಲವೆಡೆ ವ್ಯಾಪಕವಾಗಿ ಹರಡುತ್ತಿರುವಕೊರೊನಾ ವೈರಸ್‍ತಡೆಗಟ್ಟುವ ನಿಟ್ಟಿನಲ್ಲಿ
ಜಿಲ್ಲಾ ವರ್ತಕರ ಸಂಘ ಕೈಗೊಂಡಿರುವ ಮುಂಜಾಗ್ರತಾಕ್ರಮದ ನಿರ್ಧಾರಕ್ಕೆ ಬೆಂಬಲ ಸೂಚಿಸಿ ಗ್ರಾಹಕರು. ವ್ಯಾಪಾರಿಗಳ ಹಿತದೃಷ್ಟಿಯಿಂದ ವಾರದ ನಾಲ್ಕು ದಿನಗಳು ಬೆಳಗ್ಗೆ 6 ಗಂಟೆಯಿಂದ 2 ಗಂಟೆವರೆಗೆ ಹಾಗೂ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ಗಂಟವರೆಗೆ ವ್ಯಾಪಾರ ವಹಿವಾಟು ನಡೆಸಲುತೀರ್ಮಾನಿಸಲಾಗಿದೆಎಂದು ಸಿದ್ದಾಪುರ ವರ್ತಕರ ಸಂಘದಅಧ್ಯಕ್ಷ ಕೆ.ಕೆ ಶ್ರೀನಿವಾಸ್ ತಿಳಿಸಿದ್ದಾರೆ.
ಪದಾಧಿಕಾರಿಗಳೊಂದಿಗೆ ವರ್ತಕರ ಸಂಘದ ಸಭೆಯ ನಂತರ ಪತ್ರಿಕೆಯೊಂದಿಗೆ ಮಾತನಾಡಿ ಸಿದ್ದಾಪುರ ಸುತ್ತಮುತ್ತಲ ಭಾಗದಲ್ಲಿಕಾರ್ಮಿಕ ಕುಟುಂಬಗಳೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗದರೀತಿಯಲ್ಲಿ ಮಂಗಳವಾರದಿಂದ ಶುಕ್ರವಾರದ ವರಗೆ ಬೆಳಗ್ಗೆ 6 ಗಂಟೆಯಿಂದ 2 ಗಂಟೆವರೆಗೆ ಹಾಗೂ ಸೋಮವಾರ ಬೆಳಿಗ್ಗೆ 6 ಯಿಂದ ಸಂಜೆ 6 ವರಗೆ ವ್ಯಾಪಾರ ವಹಿವಾಟು ನಡೆಯಲಿದೆ.
ಶನಿವಾರ ಹಾಗೂ ಭಾನುವಾರ ಸರ್ಕಾರದಆದೇಶದಂತೆ ಸಂಪೂರ್ಣ ಬಂದ್‍ಆಗಲಿದ್ದು ಸಾರ್ವಜನಿಕರು ಹಾಗೂ ವರ್ತಕರು ಸಾಮಾಜಿಕಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸುವಂತೆ ಮನವಿ ಮಾಡಲಾಗಿದೆಎಂದು ಹೇಳಿದರು.
ಜಿಲ್ಲಾ ವರ್ತಕರ ಸಂಘದ ನಿರ್ದೇಶಕಜೋಸೆಫ್ ಸ್ಯಾಮ್, ಸಿದ್ದಾಪುರ ವರ್ತಕರ ಸಂಘದಉಪಾಧ್ಯಕ್ಷರವೂಫ್ ಹಾಜಿ,ಕಾರ್ಯದರ್ಶಿ ರೋಹಿತ್, ಮಾಜಿಗ್ರಾಮ ಪಂಚಾಯಿತಿಅಧ್ಯಕ್ಷ ಎಂ. ಕೆ ಮಣಿ, ಮಾಜಿತಾಲ್ಲೂಕು ಪಂಚಾಯಿತಿ ಸದಸ್ಯ ಬಿಜಯ್, ಎಸ್ಎನ್ ಡಿ ಪಿ ಜಿಲ್ಲಾಧ್ಯಕ್ಷ ವಿ.ಕೆ ಲೋಕೇಶ್ ಸೇರಿದಂತೆ ಮತ್ತಿತರರು ಇದ್ದರು.