ದೇವಾಟ್ ಪರಂಬ್ ನರಮೇಧ ದುರಂತದಲ್ಲಿ ಬಲಿಯಾದ ಕೊಡವ ಯೋಧರಿಗೆ ಸಿಎನ್‍ಸಿಯಿಂದ ಪುಷ್ಪಾಂಜಲಿ ಅರ್ಪಣೆ

15/07/2020

ಮಡಿಕೇರಿ ಜು. 15 : “ಕಕ್ಕಡ ಪದಿನೆಟ್” ಆರಂಭದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ವತಿಯಿಂದ ದೇವಾಟ್ ಪರಂಬ್ ಕೊಡವ ಹತ್ಯಾಕಾಂಡದ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ ಅಗಲಿದ ಕೊಡವ ಯೋಧರಿಗೆ ಪುಷ್ಪಾಂಜಲಿ ಅರ್ಪಿಸಿಸಲಾಯಿತು.

ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಮುಖ್ಯಸ್ಥ ಎನ್. ಯು. ನಾಚಪ್ಪ ಮಾತನಾಡಿ, 235 ವರ್ಷಗಳ ಹಿಂದೆ ಈ ದುರಂತ ಹತ್ಯಾಕಾಂಡವು ಸಂಭವಿಸಿದ್ದು, ನಾವು ನಮ್ಮ ಪಿತೃವರ್ಗದವರನ್ನು ಮತ್ತು ನಮ್ಮ ಪ್ರೀತಿಪಾತ್ರರ ಅಮೂಲ್ಯ ಜೀವನವನ್ನು ಕಳೆದುಕೊಂಡಿದ್ದೇವೆ ಎಂದರು.
ಕೊಡವ ಬುಡಕಟ್ಟು ಜನಾಂಗದವರನ್ನು ಎಸ್‍ಟಿ ಪಟ್ಟಿಗೆ ಸೇರಿಸಬೇಕು, ಪ್ರಜಾಪ್ರಭುತ್ವ ಸಂವಿಧಾನದ ಅಡಿಯಲ್ಲಿ ನಮ್ಮ ಐತಿಹಾಸಿಕವಾಗಿ ವ್ಯಾಖ್ಯಾನಿಸಲಾದ ಸಾಂಪ್ರದಾಯಿಕವಾದ ತಾಯ್ನಾಡಿಗೆ ಜಿಯೋ-ರಾಜಕೀಯ ಸ್ವಾಯತ್ತತೆ ಸಾಧಿಸುವ ಮೂಲಕ ಕೊಡವ ಗುರುತನ್ನು ಮರು ಸ್ಥಾಪಿಸುವಂತಾಗಬೇಕು ಮತ್ತು ಕೊಡವ ಬುಡಕಟ್ಟು ಜನಾಂಗದವರನ್ನು ಮತ್ತು ಇಡೀ ಪ್ರಪಂಚದ ಜನರನ್ನು ಕರೋನಾ ಸಾಂಕ್ರಾಮಿಕ ರೋಗದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು.

ಈ ಸಂದರ್ಭ ಸಿಎನ್‍ಸಿ ಸ್ವಯಂಸೇವಕರಾದ ಕಲಿಯಂಡ ಪ್ರಕಾಶ್, ಅರೆಯಾಡ ಗಿರೀಶ್, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ. ಎಂ. ಪಾರ್ವತಿ, ಮಂದಪಂಡ ಮನೋಜ್ ಮಂದಣ್ಣ, ಪಟ್ಟಮಾಡ ಕುಶಾ ಉಪಸ್ಥಿತರಿದ್ದರು.