ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಆಹ್ವಾನ
15/07/2020

ಮಡಿಕೇರಿ ಜು.15 : ಪ್ರಸಕ್ತ(2020-21) ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಿತ್ತಳೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಸಹಾಯಧನದಲ್ಲಿ ಕಿತ್ತಳೆ ಗಿಡ ಹಾಗೂ ಇತರೇ ಅವಶ್ಯ ಪರಿಕರಗಳ ವಿತರಣೆಗಾಗಿ ಮತ್ತು ಸಮಗ್ರ ಪೋಷಕಾಂಶ/ ಪೀಡೆನಾಶಕ ಯೋಜನೆಯಡಿಯಲ್ಲಿ ಕಾಫರ್ ಸಲ್ಪೇಟ್, ಜೈವಿಕ್ ಶೀಲಿಂದ್ರನಾಶಕ, ಜೈವಿಕ ಪೀಡೆನಾಶಕ ಖರೀದಿಸಿದಂತಹ ರೈತರಿಗೆ ಶೇ.30ರ ದರದಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ರೈತರು ಆರ್.ಟಿ.ಸಿ., ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ಸಮೀಪದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆಗೆ ಮುದ್ದಾಂ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿ ನೋಂದಾಣಿ ಮಾಡಿಕೊಳ್ಳಲು ಕೋರಿದೆ. ಅರ್ಜಿಯನ್ನು ಜುಲೈ, 31 ರೊಳಗೆ ಸಲ್ಲಿಸುವಂತೆ ಮಡಿಕೇರಿ ತೋಟಗಾರಿಕೆ ಉಪ ನಿರ್ದೇಶಕರು ತಿಳಿಸಿದ್ದಾರೆ.
