ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರ ಸಭೆ : ನೂತನ ಸದಸ್ಯರ ಅಧಿಕಾರ ಸ್ವೀಕಾರ

15/07/2020

ಮಡಿಕೇರಿ ಜು.15 : -ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸರ್ವ ಸದಸ್ಯರ ಸಭೆ ನಡೆಯಿತು.
ಸರ್ಕಾರ ಇತ್ತೀಚೆಗೆ ನೂತನ ಸದಸ್ಯರನ್ನು ನೇಮಕ ಮಾಡಿದ್ದು, ನೂತನ ಸದಸ್ಯರಾದ ಡಾ.ಕೂಡಕಂಡಿ ಸಿ.ದಯಾನಂದ, ಎ.ಟಿ.ಕುಸುಮಾದರ, ಡಾ.ವಿಶ್ವನಾಥ ಬದಿಕಾನ, ಜಯಪ್ರಕಾಶ್ ಮೋಂಟಡ್ಕ, ಪುರುಷೋತ್ತಮ ಕಿರ್ಲಾಯ, ಇವರು ಸದಸ್ಯತ್ವ ಸ್ವೀಕರಿಸಿದರು.
ಮತ್ತೊಬ್ಬ ಸದಸ್ಯರಾಗಿ ನೇಮಕವಾಗಿದ್ದ ಭಾರತಿ ರಮೇಶ್ ಅವರು ಸ್ವಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಸದಸ್ಯರಾದ ಬೈತಡ್ಕ ಜಾನಕಿ, ಸ್ಮಿತ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಆನಂದ್ ದಂಬೆಕೋಡಿ, ಅರ್ಥ ಸದಸ್ಯರಾದ ಕೆ.ಟಿ.ದರ್ಶನ್ ಇತರರು ಇದ್ದರು ಎಂದು ರಿಜಿಸ್ಟ್ರಾರ್ ಚಿನ್ನಸ್ವಾಮಿ ತಿಳಿಸಿದ್ದಾರೆ.