ವಾಲ್ನೂರು ಕುಟುಂಬಕ್ಕೆ ಕಿಟ್ ವಿತರಣೆ : ಸೀಲ್ ಡೌನ್ ವ್ಯಾಪ್ತಿಯ ಜನರಿಗೆ ಜಿಲ್ಲಾಡಾಳಿತ ಕಿಟ್ ವಿತರಿಸಬೇಕು : ಜಿ. ಪಂ. ಸದಸ್ಯೆ ಸುನಿತಾ ಒತ್ತಾಯ

15/07/2020

ಮಡಿಕೇರಿ ಜು. 14 : ವೀರಾಜಪೇಟೆಯಕಾರುಣ್ಯ ಸಹಾಯ ನಿಧಿಯ ಸಂಘಟನೆ ವತಿಯಿಂದ ವಾಲ್ನೂರು ಗ್ರಾಮದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ವ್ಯಾಪ್ತಿಯ ಮೂರು ಕುಟುಂಬಗಳಿಗೆ ಅಗತ್ಯ ಆಹಾರ ಧಾನ್ಯಗಳ ಕಿಟ್ ನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್‍ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹಲವೆಡೆ ಹರಡುತ್ತಿರುವಕೊರೊನಾ ಮಹಾಮಾರಿ ವೈರಸ್‍ತಡೆಗೆಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡಿರುವ ಜಿಲ್ಲಾಡಳಿತ ಸಿಲ್ ಡೌನ್ ವ್ಯಾಪ್ತಿಯ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಆಹಾರ ಕಿಟ್ಗಳನ್ನು ವಿತರಿಸಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಕಾರ್ಮಿಕ ಕುಟುಂಬಗಳ ಅಧಿಕವಾಗಿದ್ದು ಕಳೆದ ನಾಲ್ಕು ತಿಂಗಳಿನಿಂದ ಕೂಲಿ ಕೆಲಸವೂ ಸಿಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ದಾನಿಗಳ ಸಹಕಾರದಿಂದ ಹಲವೆಡೆ ಸಂಕಷ್ಟದಲ್ಲಿರುವಜನರ ಹಸಿವು ನಿಗುತ್ತಿದೆ.
ಇದೀಗ ಕೋರನ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ವ್ಯಾಪ್ತಿಗಳನ್ನು ಸೀಲ್ ಡೌನ್ ಮಾಡಲಾಗಿದ್ದುಜನರು ಮತ್ತಷ್ಟು ಸಮಸ್ಯೆಗೆ ಸಿಲುಕಿದ್ದಾರೆ . ಸರಕಾರ ಕೊಡಗು ಜಿಲ್ಲೆಯ ಸಂಕಷ್ಟದಲ್ಲಿರುವ ಜನರಿಗೆ ಬೇಕಾದ ಆಹಾರ ಧಾನ್ಯಗಳ ಕಿಟ್ ಗಳನ್ನು ತಕ್ಷಣ ವಿತರಿಸಬೇಕೆಂದು ಮನವಿ ಮಾಡಿದ್ದಾರೆ .
ಕಾರುಣ್ಯ ಸಹಾಯ ನಿಧಿ ಸಂಘಟನೆಯ ಕಾರ್ಯದರ್ಶಿ ಮಜೀದ್ ಚೊಕ್ಕಂಡಹಳ್ಳಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಲವೆಡೆ ಜನರು ಸಮಸ್ಯೆಗಳಲ್ಲಿ ಸಿಲುಕಿರುವುದನ್ನು ಮನಗಂಡು ಕಾರುಣ್ಯ ಸಹಾಯ ನಿಧಿ ಮೂಲಕ ಆಹಾರ ಧಾನ್ಯಗಳ ಕಿಟ್ ಳನ್ನು ದಾನಿಗಳ ಸಹಕಾರದಿಂದ ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭ ಕಾರುಣ್ಯ ಸಹಾಯ ನಿಧಿ ಸಂಘಟನೆಯ ಅಧ್ಯಕ್ಷ ನಜೀರ್‍ಚಾಮಿಯಾಲ’ ಸಂಘಟನೆ ಪ್ರಮುಖರಾದ ಅಬ್ದುಲ್ಲಾ ಹುಂಡಿ, ಕರೀಂ ಸಿದ್ದಾಪುರ , ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಲೀಂ, ಪಂಚಾಯಿತಿ ಕಾರ್ಯದರ್ಶಿ ರವಿ, ಮುಸ್ಲಿಂ ಜಮಾಅತ್‍ ಅಧ್ಯಕ್ಷ ಹನೀಪ್ ,ಗ್ರಾಮದ ಪ್ರಮುಖರಾದ ರಜಾಕ್‍ ಅಶ್ರಫ್, ಸಿದ್ದಿಕ್ ,ಹಮೀದ್ ಸೇರಿದಂತೆ ಮತ್ತಿತರರು ಇದ್ದರು.