ಸಿಲ್‍ಡೌನ್ ವ್ಯಾಪ್ತಿಯ ಕುಟುಂಬಗಳಿಗೆ ಜಿಲ್ಲಾ ಜೆಡಿಎಸ್‍ನಿಂದ ದಿನಸಿ ಕಿಟ್ ವಿತರಣೆ

15/07/2020

ಮಡಿಕೇರಿ ಜು. 15 : ಮೂರ್ನಾಡು ಗಾಂಧಿನಗರ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಈ ವ್ಯಾಪ್ತಿಯ ಕುಟುಂಬಗಳಿಗೆ ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳ ವತಿಯಿಂದ ದಿನಸಿ ಕಿಟ್ ವಿತರಿಸಲಾಯಿತು.

ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಎಂ.ಗಣೇಶ್ ಅವರ ಆದೇಶ ಮೇರೆಗೆ ಮಡಿಕೇರಿ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಬಲ್ಲಚಂಡ ಗೌತಮ್, ಯುವ ಘಟಕದ ಅಧ್ಯಕ್ಷ ಜಾಸಿರ್ ಹಾಗೂ ಪ್ರಮುಖರಾದ ಸೈಫ್ ಅಲಿ ಮತ್ತಿತರರು ನಿಯಂತ್ರಿತ ಪ್ರದೇಶದ ಜನರಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಿದರು.