ಪೆರಂಬಾಡಿಯಲ್ಲಿ ಅಕ್ರಮ ಮರಳುಗಾರಿಕೆ : ಇಬ್ಬರು ಪೊಲೀಸ್ ವಶ

15/07/2020

ಮಡಿಕೇರಿ ಜು.15 : ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಇಬ್ಬರನ್ನು ವಿರಾಜಪೇಟೆ ಪಟ್ಟಣ ಪೊಲೀಸರು ವಾಹನ ಸಹಿತ ವಶಕ್ಕೆ ಪಡೆದಿದ್ದಾರೆ. ಒಂದನೇ ಪೆರಂಬಾಡಿಯ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾಗ ಠಾಣಾಧಿಕಾರಿ ಭೋಜಪ್ಪ ಅವರು ದಾಳಿ ನಡೆಸಿ ಮಹೇಂದ್ರ ಜೀತೊ ವಾಹನ ಸಹಿತ ಸ್ಥಳೀಯ ನಿವಾಸಿಗಳಾದ ಇಸ್ಮಾಯಿಲ್ ಹಾಗೂ ನಿಸಾರ್ ಅವರನ್ನು ವಶಕ್ಕೆ ಪಡೆದರು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಗೀತಾ, ಮುಸ್ತಫ, ಗಿರೀಶ್, ಮುನೀರ್, ಸಂತೋಷ್ ಹಾಗೂ ಚಾಲಕ ಯೋಗೇಶ್ ಪಾಲ್ಗೊಂಡಿದ್ದರು.