ಸಾಮಾಜಿಕ ಕಳಕಳಿಯಿಂದ ಅವ್ಯವಸ್ಥೆ ಬಹಿರಂಗಪಡಿಸಿದ್ದೇವೆ : ಕೊಡಗು ರಕ್ಷಣಾ ವೇದಿಕೆ ಸ್ಪಷ್ಟನೆ

July 16, 2020

ಮಡಿಕೇರಿ ಜು.16 : ಕೋವಿಡ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ನಮ್ಮ ಬಳಿ ಸಾಕ್ಷ್ಯಗಳು ಇವೆ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಸ್ಪಷ್ಟಪಡಿಸಿದ್ದಾರೆ. ದೂರು ನೀಡಿದವರ ಧ್ವನಿ ಮುದ್ರಣವೂ ಇದೆ, ಸಾಮಾಜಿಕ ಕಳಕಳಿಯಿಂದ ನಾವು ಅವ್ಯವಸ್ಥೆಯನ್ನು ಬಹಿರಂಗಗೊಳಿಸಿದ್ದೇವೆ. ನಮ್ಮ ಬಳಿ ಇರುವ ವೀಡಿಯೋ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬಹುದಿತ್ತು. ಪೊಲೀಸ್ ದೂರು ನೀಡಿ ಹೆದರಿಸಲು ನಾವೇನೂ ಕಳ್ಳರಲ್ಲ, ಜಿಲ್ಲಾಡಳಿತ ಪ್ರಶ್ನಾತೀತವಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

error: Content is protected !!