ಕೊರೋನಾ ವೈರಸ್ ಹತೋಟಿಗೆ ತರುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ : ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ.ಶಾಹೀದ್

16/07/2020

ಮಡಿಕೇರಿ ಜು. 16 : ವಿರೋಧ ಪಕ್ಷದ ಸಂಪೂರ್ಣ ಸಹಕಾರವಿದ್ದರೂ ರಾಜ್ಯ ಸರ್ಕಾರ ಕೊರೋನಾ ರೋಗ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದ್ದು, ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೆ.ಪಿ.ಸಿ.ಸಿ.ಯ ಮಾಜಿ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಟಿ.ಎಂ.ಶಾಹೀದ್ ತೆಕ್ಕಿಲ್ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಾಥಮಿಕ ಹಂತದಲ್ಲಿ ರೋಗವನ್ನು ನಿಯಂತ್ರಿಸಲು ವಿಫಲವಾಗಿರುವ ಸರ್ಕಾರ ನಾಲ್ಕು ತಿಂಗಳು ಬೇಜವಬ್ದಾರಿತನದಿಂದ ವರ್ತಿಸಿದೆ ಎಂದು ಟೀಕಿಸಿದ್ದಾರೆ.