ಕುಶಾಲನಗರದಲ್ಲಿ ಬಂದ್ ಗೆ ಉತ್ತಮ ಸ್ಪಂದನೆ
16/07/2020

ಮಡಿಕೇರಿ ಜು.16 : ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕುಶಾಲನಗರದಲ್ಲಿ ಈ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಈ ಕಾರಣದಿಂದ ಸ್ಥಳೀಯ ವರ್ತಕರು ಮೂರು ದಿನಗಳ ಬಂದ್ ಗೆ ಕರೆ ನೀಡಿದ್ದು, ಗುರುವಾರ ಪಟ್ಟಣ ಸ್ತಬ್ಧವಾಗಿದೆ. ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದು, ಸಾರ್ವಜನಿಕರು ಕೂಡ ಸಹಕಾರ ನೀಡಿದ್ದಾರೆ. ಸರ್ಕಾರದ ಸೂಚನೆಯಂತೆ ಶನಿವಾರ ಮತ್ತು ಭಾನುವಾರ ಕೂಡ ಕುಶಾಲನಗರ ಲಾಕ್ ಡೌನ್ ಆಗಲಿದೆ.
