ಕೊಡಗಿನ ಯುವಕರಿಂದ “ವ್ಯಸನಿ-ಹೋಂ ಕ್ವಾರಂಟೈನ್” ಕಿರುಚಿತ್ರ ಬಿಡುಗಡೆ

July 16, 2020

ಮಡಿಕೇರಿ ಜು. 16 : ಲಾಕ್ ಡೌನ್ ಸಮಯದಲ್ಲಿ ಕೊಡಗಿನ ಯುವಕರು ಸೇರಿ ಚಿತ್ರೀಕರಿಸಿರುವ “ವ್ಯಸನಿ- ಹೋಂ ಕ್ವಾರಂಟೈನ್” ಎಂಬ ಕಿರು ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಕುಟುಂಬದಲ್ಲಿ ಒಬ್ಬ ಮಾದಕ ವ್ಯಸನಿಯಾದರೆ ಕುಟುಂಬಕ್ಕೆ ಬಂದೊದಗುವ ಸಮಸ್ಯೆಯನ್ನು ಕಿರು ಚಿತ್ರದ ಮೂಲಕ ತೋರಿಸಲಾಗಿದೆ. ಕಿರುಚಿತ್ರದ ವಿಷಯ ಹಾಗೂ ಅಭಿನಯಕ್ಕೆ ಕೊಡಗಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.
ಚಿತ್ರದಲ್ಲಿ ಜೆ.ಪಿ. ಶೆಟ್ಟಿ, ಹರ್ಷಿತ ಶೆಟ್ಟಿ, ಸರಿತಾ ನಟಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಅನುವರ್ಗೀಸ್ ಹಾಗೂ ಅಣ್ಣಪ್ಪ ಮಾಡಿದ್ದು, ಚಿತ್ರದ ಎಡಿಟಿಂಗ್ ಶೃಜನ್ ಫೆಮ್ ಮಾಡಿದ್ದಾರೆ. ಕಥೆ, ಸಂಭಾಷಣೆ, ನಿರ್ದೇಶನವನ್ನು ಜೆಪಿ ಶೆಟ್ಟಿ ಮಾಡಿದ್ದಾರೆ. https://youtu.be/dDPxytZtJ2w