ಶ್ರೀ ಸಿದ್ಧಗಂಗಾ ಮಠದಲ್ಲಿ ಮೌಲ್ಯಯುತ ಶಿಕ್ಷಣ ಪಡೆಯುವ ಸುವರ್ಣಾವಕಾಶ

July 16, 2020

ಮಡಿಕೇರಿ ಜು. 16 : ಶ್ರೀ ಸಿದ್ಧಗಂಗಾ ಮಠದ ದಿವ್ಯ ಸಾನಿಧ್ಯದಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಪಡೆಯುವ ಸುವರ್ಣಾವಕಾಶವಿದೆ.

ದ್ವಿತೀಯ ಪಿ.ಯು.ಸಿ ಪಾಸ್ ಆಗಿರುವ ಬಡ ಮಕ್ಕಳು (D.Ed) D. El.Ed ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಎಲ್ಲವನ್ನು ಉಚಿತವಾಗಿ ನೀಡಿ, ಕೇವಲ 4 ಸಾವಿರ ಸರ್ಕಾರಿ ಹಣವನ್ನು ಮಾತ್ರ ತುಂಬಿದರೆ ಸಾಕು.
ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.
ಪಿಯುಸಿ ಯಲ್ಲಿ ಎಸ್.ಸಿ, ಎಸ್‍ಟಿ ವಿದ್ಯಾರ್ಥಿಗಳು 600 ಅಂಕಗಳಿಗೆ 270 ಅಂಕಗಳನ್ನು (45%) ಪಡೆದಿರಬೇಕು, ಇತರೆ ಹಿಂದುಳಿದ ಎಲ್ಲಾ ವಿದ್ಯಾರ್ಥಿಗಳು 600 ಅಂಕಗಳಿಗೆ 300 ಅಂಕಗಳನ್ನು(50%)ಪಡೆದಿದ್ದರೆ ಮಾತ್ರ ದಾಖಲಾಗಲು ಸಾಧ್ಯ.

ಕಾಲೇಜು ವಿಳಾಸ: ಶ್ರೀ ಬಸವೇಶ್ವರ ಶಿಕ್ಷಕ (RER) ತರಬೇತಿ ಸಂಸ್ಥೆ, ಸಿದ್ಧಗಂಗಾ ಮಠ, ಕ್ಯಾತ್ಸಂದ್ರ ತುಮಕೂರು ಹೆಚ್ಚಿನ ಮಾಹಿತಿಗೆ ರಾಜಸುಲೋಚನಾ ದೇವಿ ಅಧೀಕ್ಷಕರು ಮೊ.ಸಂ-9740859191 ಸಂಪರ್ಕಿಸಬಹುದಾಗಿದೆ.

error: Content is protected !!