ಸೋಮವಾರಪೇಟೆ ತೊರೆನೂರಿನಲ್ಲಿ ಕೊರೋನಾಗೆ ವೃದ್ಧೆ ಬಲಿ

16/07/2020

ಮಡಿಕೇರಿ ಜು. 16 : ಸೋಮವಾರಪೇಟೆ ತಾಲ್ಲೂಕು ತೊರೆನೂರು ಗ್ರಾಮದ ನಿಯಂತ್ರಿತ ಪ್ರದೇಶದಲ್ಲಿ ವಾಸವಿದ್ದ 90 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿರುತ್ತಾರೆ. ವಿಷಯ ತಿಳಿದ ಕೂಡಲೇ ವೈದ್ಯಕೀಯ ಸಿಬ್ಬಂದಿಗಳು ತೆರಳಿ Rapid Antigen Kit ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ದೃಢಪಟ್ಟಿರುವುದು ಸಾಬೀತಾಗಿರುತ್ತದೆ.
ಇವರಿಗೆ ಬೇರಾವುದೇ ರೋಗ ಲಕ್ಷಣಗಳು ಇರುವುದಿಲ್ಲ ಮತ್ತು ಮೃತರಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದರಿಂದ ಇದನ್ನು ಕೋವಿಡ್ ಸಂಬಂಧಿತ ಮರಣ ಎಂದು ತೀರ್ಮಾನಿಸಿ ಸರ್ಕಾರದ ಮಾರ್ಗಸೂಚಿಯನುಸಾರ ಸಂಜೆ ಮೃತರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.