ವಿರಾಜಪೇಟೆಯಲ್ಲಿ ಪ್ರಥಮ ಬಿಎ, ಬಿಕಾಂ, ಬಿಬಿಎ ಮತ್ತು ಬಿಎಸ್ಸಿ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭ

16/07/2020

ಮಡಿಕೇರಿ ಜು.16 : ಪ್ರಸಕ್ತ(2020-21 ನೇ ಶೈಕ್ಷಣಿಕ ಸಾಲಿನ ಪ್ರಥಮ ಬಿಎ, ಬಿಕಾಂ, ಬಿಬಿಎ ಮತ್ತು ಬಿಎಸ್ಸಿ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದ್ದು, ಜುಲೈ, 15 ರಿಂದ ಪ್ರವೇಶಾತಿ ಅರ್ಜಿಗಳನ್ನು ನೀಡಲಾಗುತ್ತಿದ್ದು, ನ್ಯಾಕ್‍ನಿಂದ ‘ಬಿ’ ಮಾನ್ಯತೆ ಪಡೆದಿರುವ ಕಾಲೇಜು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತವಾದ ತರಗತಿ ಕೊಠಡಿಗಳು ಮತ್ತು ನುರಿತ ಬೋಧಕರನ್ನು ಒಳಗೊಂಡಿದೆ.
ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅವಶ್ಯಕವಿರುವ ಸುಮಾರು 14 ಸಾವಿರ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವಿದ್ದು, ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕøತಿಕ, ಎನ್‍ಎಸ್‍ಎಸ್, ರೋವರ್ಸ್, ರೇಂಜರ್ಸ್, ರೆಡ್‍ಕ್ರಾಸ್ ಮುಂತಾದ ಘಟಕಗಳು ಕಾರ್ಯನಿರತವಾಗಿದೆ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.