ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಪ್ರವೇಶಾತಿ ಪ್ರಾರಂಭ

July 16, 2020

ಮಡಿಕೇರಿ ಜು.16 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಪ್ರಸಕ್ತ(2020-21) ಸಾಲಿನ ಪ್ರವೇಶಾತಿಯು ಪ್ರಾರಂಭಗೊಂಡಿದ್ದು. ಸರ್ಕಾರದ ಮಾರ್ಗಸೂಚಿ ಅನ್ವಯ ಪ್ರವೇಶಾತಿ ನಡೆಸಲಾಗುವುದು. ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿ.ಎಎಚ್, ಆರ್.ಡಿ, ಬಿ.ಎಸ್ಸಿ, ಬಿ.ಎಸ್.ಡಬ್ಲ್ಯು ಕೋರ್ಸ್‍ಗಳಿಗೆ ಉಚಿತವಾಗಿ ಅರ್ಜಿಯನ್ನು ಕಾಲೇಜಿನಲ್ಲಿ ಹಾಗೂ ಕಾಲೇಜಿನ ಜಾಲತಾಣದಲ್ಲಿ ಪಡೆದುಕೊಳ್ಳಬಹುದು. ನಿಯಮಾನುಸಾರ ಭರ್ತಿ ಮಾಡಿದ ಅರ್ಜಿಯನ್ನು ಕಾಲೇಜಿನ ಕಚೇರಿಗೆ ಹಿಂದಿರುಗಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08272-228334/8088272689 ಅಥವಾ www.fmkmcc.edu.in ಸಂಪರ್ಕಿಸಬಹುದು ಎಂದು ಫಿಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಶುಂಪಾಲರು ತಿಳಿಸಿದ್ದಾರೆ.

error: Content is protected !!