ಚೆಟ್ಟಳ್ಳಿಯಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ

17/07/2020

ಮಡಿಕೇರಿ ಜು. 17 : ಚೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಂಕು ಧೃಡಪಟ್ಟಿದ್ದ ಕಂಡಕರೆ ಒಂದು ಪ್ರದೇಶದ ಕಂಟೈನ್ಮೆಂಟ್ ಝೋನ್ ನಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಲಾಯಿತು.
ಚೆಟ್ಟಳ್ಳಿಯಲ್ಲಿ ಸೋಂಕು ಧೃಡಪಟ್ಟ ವ್ಯಕ್ತಿಯ ಮನೆಯ‌ 100 ಮೀಟರ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದೀಶ್ ತಿಳಿಸಿದ್ದಾರೆ.
ಅಲ್ಲದೆ ಚೆಟ್ಟಳ್ಳಿ ಮಾರುಕಟ್ಟೆ ಹಾಗೂ ಚೆಟ್ಟಳ್ಳಿ ಸುತ್ತುಮುತ್ತಲು ಸ್ಯಾನಿಟೈಸ್ ಮಾಡಲಾಗಿದ್ದು, ಕಂಟೈನ್ಮೆಂಟ್ ಝೋನ್ ಪ್ರದೇಶದಿಂದ ಯಾರು ಕೂಡ ಹೊರಬಾರದೆ, ಕೊರೊನಾ ಸೋಂಕು ‌ಮುಕ್ತ ಗ್ರಾಮ ಮಾಡುವಲ್ಲಿ ಪಂಚಾಯತಿಯೊಂದಿಗೆ ಕೈಜೋಡಿಸಬೇಕು ಎಂದು ಅಭಿವೃದ್ಧಿ ಅಧಿಕಾರಿ ನಂದೀಶ್ ಮನವಿ ಮಾಡಿದರು.