ಕೊಡಗು ಜಿಲ್ಲೆಯ ಮಳೆ ವಿವರ

July 17, 2020

ಮಡಿಕೇರಿ ಜು.17 : ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 60.32 ಮಿ.ಮೀ. ಆಗಿದೆ
ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 79.55 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 59.07 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 42.35 ಮಿ.ಮೀ. ಆಗಿದೆ
ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 63.6, ನಾಪೋಕ್ಲು 120.2 ಸಂಪಾಜೆ 76.2, ಭಾಗಮಂಡಲ 58.2, ವೀರಾಜಪೇಟೆ ಕಸಬಾ 56.4, ಹುದಿಕೇರಿ 97 ಶ್ರೀಮಂಗಲ 71.6, ಪೊನ್ನಂಪೇಟೆ 58, ಅಮ್ಮತ್ತಿ 27, ಬಾಳೆಲೆ 44.4, ಸೋಮವಾರಪೇಟೆ ಕಸಬಾ 48.6 ಶನಿವಾರಸಂತೆ 28.2, ಶಾಂತಳ್ಳಿ 80.1, ಕೊಡ್ಲಿಪೇಟೆ 50.2, ಕುಶಾಲನಗರ 15, ಸುಂಟಿಕೊಪ್ಪ 32 ಮಿ.ಮೀ.ಮಳೆಯಾಗಿದೆ.