ಸುಂಟಿಕೊಪ್ಪದಲ್ಲಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಕಾರ್ಯಕ್ರಮ

July 17, 2020

ಸುಂಟಿಕೊಪ್ಪ,ಜು. 17 : ವರ್ಕ್‍ಶಾಪ್ ಯೂನಿಯನ್ ವತಿಯಿಂದ ಕರೋನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವರ್ಕ್‍ಶಾಫ್ ಹಾಗೂ ಬಿಡಿಭಾಗಗಳ ಮಾರಾಟ ಮಳಿಗೆಗಳಲ್ಲಿ ಭಿತ್ತಿ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಸುಂಟಿಕೊಪ್ಪ ವ್ಯಾಪ್ತಿಯಲ್ಲಿ 40 ಅಂಗಡಿ ವರ್ಕ್‍ಶಾಪ್‍ಗಳಿಗೆ ಭೀತಿ ಪತ್ರ ವಿತರಿಸಿ ಮಾತನಾಡಿದ ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎ.ಸಂತೋಷ್, ಕರೋನಾ ಮಹಾಮಾರಿಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಇದನ್ನು ವಾಹನ ಮಾಲೀಕರು, ಚಾಲಕರು ವರ್ಕ್‍ಶಾಪ್‍ಗಳಲ್ಲಿ ಕೆಲಸ ನಿರ್ವಹಿಸುವಾಗ ಕೈಗ್ಲೊಸ್ ಹಾಗೂ ಸಾನಿಟೈಸರ್ , ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವರ್ಕ್‍ಶಾಪ್ ಮಾಲೀಕರ ಸಂಘದ ಕಾರ್ಯದರ್ಶಿ ಹೂವೇಗೌಡ, ಮಾಜಿ ಕಾರ್ಯದರ್ಶಿ ಪಿ.ಆರ್.ಸುನಿಲ್‍ಕುಮಾರ್ ಸಮಿತಿ ಸದಸ್ಯರುಗಳು ಇದ್ದರು.

error: Content is protected !!