ವಿರಾಜಪೇಟೆಯಲ್ಲಿ 4.5 ಲಕ್ಷ ರೂ.ಮೌಲ್ಯದ ಮದ್ಯ ನಾಶ

17/07/2020

ಮಡಿಕೇರಿ ಜು.17 : ವಿರಾಜಪೇಟೆ ವಲಯ ಕಚೇರಿಯ ಅಬಕಾರಿ ನಿರೀಕ್ಷಕರ ಸುಪರ್ದಿಯಲ್ಲಿರುವ ಅಬಕಾರಿ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ಹಾಗೂ ನವೀಕರಣಗೊಳ್ಳದೇ ಇರುವ ಸನ್ನದಿನಲ್ಲಿದ್ದ ಸುಮಾರು 4.5 ಲಕ್ಷ ರೂ.ಮೌಲ್ಯದ ಮದ್ಯವನ್ನು ಅಬಕಾರಿ ಉಪ ಆಯುಕ್ತರಾದ ಬಿಂದುಶ್ರೀ ಅವರ ಆದೇಶದಂತೆ ನಾಶ ಪಡಿಸಲಾಗಿದೆ.
ಅಬಕಾರಿ ಮೊಕದ್ದಮೆಗಳಲ್ಲಿ ಹಾಗೂ 2 ಸನ್ನದು ನವೀಕರಣಗೊಳ್ಳದೇ ಇರುವ ಸನ್ನದಿನಲ್ಲಿದ್ದ ಮದ್ಯವನ್ನು ಇಲಾಖೆ ವಶಕ್ಕೆ ಪಡೆದಿತ್ತು. ಸ್ವದೇಶಿ ಮದ್ಯ 740.160 ಲೀಟರ್, ಬೀಯರ್ 32.150 ಲೀಟರ್, ಕಳ್ಳಭಟ್ಟಿ ಸಾರಾಯಿ 25.570 ಲೀಟರ್, ಲ್ಯಾಬ್ 41 ಲೀಟರ್ ಹಾಗೂ 8.250 ಲೀಟರ್ ವೈನ್ ನ್ನು ನಾಶ ಪಡಿಸಲಾಗಿದೆ ಎಂದು ವಿರಾಜಪೇಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ತಿಳಿಸಿದ್ದಾರೆ.