ಗಡಿಯಲ್ಲಿ ನಿರಂತರ ನಿಗಾ ಅಗತ್ಯ

17/07/2020

ನವದೆಹಲಿ ಜು.17 : ಪೂರ್ವ ಲಡಾಖ್ ನ ವಾಸ್ತವ ಗಡಿ ನಿಯಂತ್ರಣ(ಎಲ್ ಎಸಿ) ರೇಖೆಯಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಪಡೆದುಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಆದರೆ ಪಿಎಲ್‍ಎಯಿಂದ ಚೀನಾ ಹಿಂದಕ್ಕೆ ಸರಿಯುವ ಕುರಿತು “ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಭಾರತೀಯ ಸೇನೆ ಒತ್ತಿ ಹೇಳಿದೆ.
ಸಂಘರ್ಷದಿಂದ ಸಂಪೂರ್ಣ ಹಿಂದೆ ಸರಿಯುವ ಉದ್ದೇಶಕ್ಕೆ ಎರಡೂ ಕಡೆಯವರು ಬದ್ಧರಾಗಿರುತ್ತಾರೆ. ಆದರೆ ಸೇನೆ ಹಿಂಪಡೆಯುವ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಭಾರತೀಯ ಸೇನೆ ಹೇಳಿದೆ.
ಎಲ್‍ಎಸಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಸುಧಾರಣೆಗಾಗಿ ನಡೆದ ಕಮಾಂಡರ್ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ, ಈಗಿನ ಸ್ಥಳದಿಂದ ಪೂರ್ವನಿರ್ಧರಿತ ದೂರಕ್ಕೆ ಸೈನ್ಯವನ್ನು ಹಿಂತಿರುಗಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ.