ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆ

17/07/2020

ಮಡಿಕೇರಿ ಜು. 17 : ಕೊಡಗು ಜಿಲ್ಲೆಯಲ್ಲಿ ಮತ್ತೆ 13 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆಯಾಗಿದೆ.

  1. 39 ವರ್ಷದ ಪುರುಷ, 35 ವರ್ಷದ ಮಹಿಳೆ, 5 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 2 ವರ್ಷದ ಮಗು. ಶಿವ ಪಾರ್ವತಿ ದೇವಸ್ಥಾನದ ಸಮೀಪ, ಮರಗೋಡು ಮಡಿಕೇರಿಯಲ್ಲಿ ವಾಸವಾಗಿದ್ದಾರೆ. ಕಾರಣ: ಪ್ರಾಥಮಿಕ ಸಂಪರ್ಕಗಳು.
  2. 40 ವರ್ಷದ ಪುರುಷ, 23 ವರ್ಷದ ಪುರುಷ ಮತ್ತು 50 ವರ್ಷದ ಪುರುಷ, ಮೂಲದ ಪಾರೆಮಜಲು, ಮುಟ್ಟರ್ಮೋಡಿ ಗ್ರಾಮ ಮೂರ್ನಾಡು ಮಡಿಕೇರಿ. ಕಾರಣ : ಬೆಂಗಳೂರು ಪ್ರಯಾಣದ ಇತಿಹಾಸ.
  3. 57 ವರ್ಷದ ಮಹಿಳೆ, ಮೈತ್ರಿನಗರ ಪೊನ್ನಂಪೇಟೆ ವಿರಾಜಪೇಟೆ ತಾಲ್ಲೂಕಿನವರು (ಐಎಲ್‌ಐ ಪ್ರಕರಣ).
  4. 46 ವರ್ಷ ವಯಸ್ಸಿನ ಪುರುಷ, ಧೋಬಿ ಕಾಲೋನಿ ಪೊನ್ನಂಪೇಟೆ ವಿರಾಜಪೇಟೆ ತಾಲ್ಲೂಕಿನವರು (ಐಎಲ್‌ಐ ಪ್ರಕರಣ).
  5. 55 ವರ್ಷ ವಯಸ್ಸಿನ ಪುರುಷ, ಜ್ಯೋತಿನಗರ ಗ್ರಾಮದ ಅಬ್ಯತ್ ಮಂಗಳ ಸೋಮವಾರಪೇಟೆ ತಾಲ್ಲೂಕಿನವರು (ಐಎಲ್ಐ ಪ್ರಕರಣ).
  6. 39 ವರ್ಷದ ಪುರುಷ, ಕಾವೇರಿ ಶಾಲೆಯ ಸಮೀಪ, ಶನಿವಾರಸಂತೆ, ಸೋಮವಾರಪೇಟೆ ತಾಲ್ಲೂಕು (ಐ.ಎಲ್.ಐ).
  7. 28 ವರ್ಷದ ಮಹಿಳೆ, ಬಸವನಹಳ್ಳಿ ಸೋಮವಾರಪೇಟೆ ತಾಲ್ಲೂಕಿನವರು. ಕಾರಣ: ಬೆಂಗಳೂರಿನಿಂದ ಪ್ರಯಾಣದ ಇತಿಹಾಸ. ಒಟ್ಟು 115 ಮಂದಿ ಬಿಡುಗಡೆಯಾಗಿದ್ದಾರೆ. ನಾಲ್ವರು ಮೃತಪಟ್ಟಿದ್ದು, 133 ಪ್ರಕರಣಗಳು ಸಕ್ರಿಯವಾಗಿವೆ. ಇದರೊಂದಿಗೆ ನಿಯಂತ್ರಿತ ಪ್ರದೇಶಗಳ ಸಂಖ್ಯೆ 104ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ನಿಯಂತ್ರಿತ ವಲಯ : ಶಿವ ಪಾರ್ವತಿ ದೇವಸ್ಥಾನದ ಸಮೀಪ, ಮರಗೋಡು ಮಡಿಕೇರಿ
ಪಾರೆಮಜಲು, ಮುಟ್ಟರ್ಮೋಡಿ ಗ್ರಾಮ ಮೂರ್ನಾಡು ಮಡಿಕೇರಿ
ಮೈತ್ರಿನಗರ ಪೊನ್ನಂಪೇಟೆ ವಿರಾಜಪೇಟೆ
ಧೋಬಿ ಕಾಲೋನಿ ಪೊನ್ನಂಪೇಟೆ, ವಿರಾಜಪೇಟೆ
ಜ್ಯೋತಿನಗರ ಗ್ರಾಮದ ಅಬ್ಯತ್ ಮಂಗಳ ಸೋಮವಾರಪೇಟೆ ತಾಲೂಕು,
ಕಾವೇರಿ ಶಾಲೆಯ ಸಮೀಪ, ಶನಿವಾರಸಂತೆ, ಸೋಮವಾರಪೇಟೆ ತಾಲ್ಲೂಕು
ಬಸವನಹಳ್ಳಿ ಸೋಮವಾರಪೇಟೆ