ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಮಕ್ಕತ್ತುಲ್ ಮುಕರ್ರಮ ಸಮಿತಿ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ಡಾಕ್ಟರ್ ಫಹೀಂ ಕೊಟ್ಟಮುಡಿ ಆಯ್ಕೆ

ಮಡಿಕೇರಿ ಜು. 17 : ಕೊಡಗಿನ ಅನಿವಾಸಿಗಳ ಹೆಮ್ಮೆಯ ಸಂಘಟನೆಯಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್, ಸೌದಿ ಅರೇಬಿಯಾದ ಅಲ್ ಹಸ್ಸಾ ದಮ್ಮಾಂ, ರಿಯಾದ್, ಅಲ್ ರಾಸ್, ಬುರೈದ, ಮದೀನತುಲ್ ಮುನವ್ವರ, ಯಾಂಬೋ, ಜಿದ್ದಾ, ಸ್ಥಳಗಳಲ್ಲಿ ಯಶಸ್ವಿಯಾಗಿ ಸಮಾಜ ಸೇವೆ ಮಾಡುತ್ತಾ ಬಂದಿದೆ.
ಇದೀಗ ಮುಸ್ಲಿಂ ಸಮುದಾಯದ ಆಶಾ ಕೇಂದ್ರ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ಜನ್ಮತಾಳಿದ ಪವಿತ್ರ ನಾಡು ಮಕ್ಕತ್ತುಲ್ ಮುಕರ್ರಮದಲ್ಲಿ ನೂತನ ವಲಯ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದ ಪ್ರಾರ್ಥನೆಯನ್ನು ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಕೋಶಾಧಕಕಾರಿ ಹಂಸ ಉಸ್ತಾದ್ ಚೋಕಂಡಳ್ಳಿ ನೆರವೇರಿಸಿದರು.
ರಾಷ್ಟ್ರೀಯ ಸಲಹಾ ಸಮಿತಿ ಸಂಚಾಲಕ ಅಸ್ಸಯ್ಯದ್ ಅಬ್ದುಲ್ ಖಾದರ್ ಅಲ್ ಬುಖಾರಿ ಅಯ್ಯಂಗೇರಿ ಅವರ ಅಧ್ಯಕ್ಷತೆಯಲ್ಲಿ ಆನ್‌ಲೈನ್ ಸಭೆ ನಡೆಯಿತು.
ಸಭೆಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಸಿದ್ದೀಖ್ ಝುಹ್ರಿ ಉದ್ಘಾಟಿಸಿದರು.
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಮತ್ತು ಸೌದಿ ಅರೇಬಿಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕರೆ ವಿಷಯ ಮಂಡಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ಡಾಕ್ಟರ್ ಫಹೀಂ ಕೊಟ್ಟಮುಡಿ, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಕೊಳಕೇರಿ, ಕೋಶಾಧಿಕಾರಿ ಯಾಗಿ ಅಬ್ದುಲ್ ಸಲಾಂ ಎಮ್ಮೆಮಾಡು, ರಿಲೀಫ್ ಬೋರ್ಡ್ ಸಂಚಾಲಕರಾಗಿ ಅಬ್ದುಲ್ ರಝಾಖ್ ಗುಂಡಿಕರೆ ಆಯ್ಕೆಯಾಗಿದ್ದಾರೆ.
ರಫೀಕ್ ಕೊಳಕೇರಿ ಸ್ವಾಗತಿಸಿ ಇಸ್ಹಾಖ್ ಕುಂಜಿಲ ವಂದಿಸಿದರು.
