ಸೋಮವಾರಪೇಟೆಯ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಂದ ನಿಯಮ ಮೀರಿ ಹಣ ವಸೂಲಿ ಆರೋಪ : ತಹಶೀಲ್ದಾರರಿಗೆ ದೂರು

July 17, 2020

ಮಡಿಕೇರಿ ಜು. 17 : ಸೋಮವಾರಪೇಟೆ ಪಟ್ಟಣದ ಬಸವೇಶ್ವರ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ತೂಕ ಆಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಕಾರ್ಡ್‍ದಾರರು ತಹಶೀಲ್ದಾರರಿಗೆ ದೂರು ನೀಡಿದರು.
ಕೋವಿಡ್-19 ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲೂ ಕಾರ್ಡ್‍ದಾರರಿಂದ ಹೆಚ್ಚುವರಿ 20 ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಅಂಗಡಿಯಿರುವ ಮಳಿಗೆ ಸೋರುತ್ತಿದ್ದು, ಅಕ್ಕಿಯನ್ನು ನೆಲಕ್ಕೆ ಸುರಿದು, ನಂತರ ಕಸಕಡ್ಡಿ, ಇಲಿಹಿಕ್ಕೆ ಸಮೇತ ತೂಕ ಮಾಡಲಾಗುತ್ತದೆ. ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ನಿಂಗರಾಜು ಅವರನ್ನು ಪ್ರಶ್ನಿಸಿದರೆ, ನಿಮ್ಮ ಕಾರ್ಡ್ ರದ್ದುಪಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ಇಲಾಖೆಯ ಅಧಿಕಾರಿಗಳ ಮಾತಿಗೂ ಬೆಲೆ ಕೊಡುತ್ತಿಲ್ಲ ಎಂದು ತಹಸೀಲ್ದಾರರೊಂದಿಗೆ ಅಳಲು ತೋಡಿಕೊಂಡರು. ನ್ಯಾಯಬೆಲೆ ಅಂಗಡಿಯ ದುಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿ, ಸಿಬ್ಬಂದಿಯ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವಂತೆ ಆಹಾರ ನಿರೀಕ್ಷಕ ಮಂಜುನಾಥ್ ಅವರಿಗೆ ತಹಸೀಲ್ದಾರ್ ಸೂಚಿಸಿದರು. ಸ್ಥಳೀಯರಾದ ಸಂತೋಷ್, ಯೋಗೇಶ್, ಒಹಿಲೇಶ್, ಜಯಂತ್, ಶೇಖರ್ ಇದ್ದರು.

error: Content is protected !!