ಮಾದಾಪುರ ಜಂಬೂರು ಬಾಣೆ ಸೀಲ್ ಡೌನ್

18/07/2020

ಸುಂಟಿಕೊಪ್ಪ ಜು.18 : ಮಾದಾಪುರ ಜಂಬೂರು ಬಾಣೆಯಲ್ಲಿ ಮಹಿಳೆಯೋರ್ವರಲ್ಲಿ ಕೊವೀಡ್-19 ಪಾಸಿಟಿವ್ ಕಂಡು ಬಂದ ಹಿನ್ನೆಲೆ ಸೀಲ್ ಡೌನ್ ಮಾಡಲಾಯಿತು.
ಜಂಬೂರು ಬಾಣೆಯ 26 ವರ್ಷದ ಮಹಿಳೆಯೋರ್ವರಿಗೆ ಸೋಂಕು ದೃಢಪಟ್ಟಿದ್ದು, ಸ್ಥಳಕ್ಕೆ ಭೇಟಿ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಗೋವಿಂದರಾಜು, ಜಿಲ್ಲಾ ಆರೋಗ್ಯಧಿಕಾರಿ ಮೋಹನ್, ಕಂದಾಯ ಪರಿವೀಕ್ಷಕರಾದ ಶಿವಪ್ಪ, ಗ್ರಾಮಲೆಕ್ಕಿಗರಾದ ಚಂದನ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳಿಗೆ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿದರು.