ಸುಂಟಿಕೊಪ್ಪದಲ್ಲಿ ಎಸ್ ಡಿಪಿಐಯಿಂದ ದಿನಸಿ ಕಿಟ್ ವಿತರಣೆ

July 18, 2020

ಮಡಿಕೇರಿ ಜು.18 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ಸುಂಟಿಕೊಪ್ಪದ ಸೀಲ್ ಡೌನ್ ಪ್ರದೇಶಗಳ ಬಡ ಕುಟುಂಬಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ವಿವಿಧ ಬಡಾವಣೆಗಳು ಸೀಲ್ ಡೌನ್ ಗೆ ಒಳಗಾಗಿವೆ. ಬಡವರ್ಗ ಹಾಗೂ ಕಾರ್ಮಿಕ ಕುಟುಂಬಗಳು ಕೆಲಸಕ್ಕೆ ಹೋಗಲು ಸಾಧ್ಯವಾಗದೆ ಇರುವುದರಿಂದ ದಿನಸಿ ಕಿಟ್ ಗಳನ್ನು ವಿತರಿಸಲಾಗಿದೆ ಎಂದು ಎಸ್ ಡಿಪಿಐ ಪ್ರಮುಖರು ತಿಳಿಸಿದರು.

ಎಸ್‍ಡಿಪಿಐ ನಗರಾಧ್ಯಕ್ಷ ಬಾಶಿತ್, ವಲಯಾಧ್ಯಕ್ಷ ಕೆ.ಎ.ಉಸ್ಮಾನ್, ಪಂಚಾಯಿತಿ ಸದಸ್ಯೆ ನಾಗರತ್ನ ಸುರೇಶ್, ಪಕ್ಷದ ಕಾರ್ಯಕರ್ತರು ಇದ್ದರು.

error: Content is protected !!