ಸುಮ್ಮನೆ ಅಡ್ಡಾಡಿದವರನ್ನು ವಿಚಾರಿಸಿಕೊಂಡ ಸುಂಟಿಕೊಪ್ಪ ಪೊಲೀಸರು

18/07/2020

ಸುಂಟಿಕೊಪ್ಪ ಜು.18 : ಶನಿವಾರದ ಲಾಕ್ ಡೌನ್ ಹಿನ್ನೆಲೆ ಸುಂಟಿಕೊಪ್ಪದ ವರ್ತಕರು ಎಲ್ಲಾ ಅಂಗಡಿಗಳನ್ನು ಮುಚ್ಚಿ ಸಹಕರಿಸಿದರು. ಆದರೆ ಕೆಲವರು ವಾಹನದಲ್ಲಿ ಅಡ್ಡಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.