ಸೋಮವಾರಪೇಟೆ ಸಂಪೂರ್ಣ ಬಂದ್

18/07/2020

ಸೋಮವಾರಪೇಟೆ ಜು.18 :ಕೋವಿಡ್-19 ಸೋಂಕು ಹರಡುವ ಹಿನ್ನಲೆ, ಶನಿವಾರ, ಭಾನುವಾರ ಜಿಲ್ಲಾಡಳಿತ ಲಾಕ್‍ಡೌನ್ ಘೋಷಣೆ ಮಾಡಿರುವುದರಿಂದ ಶನಿವಾರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.
ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರು. ಆಟೋ, ಬಾಡಿಗೆ ವಾಹನಗಳು ರಸ್ತೆಗಿಳಿಯಲಿಲ್ಲ. ಕೋವಿಡ್-19 ಕರ್ತವ್ಯ ನಿಮಿತ್ತ ಒಂದಷ್ಟು ವಾಹನಗಳು ಸಂಚರಿಸಿದ್ದು ಬಿಟ್ಟರೆ, ಜನರ ಮನೆಯಲ್ಲೇ ಉಳಿದರು. ವೈದ್ಯಕೀಯ ಸೇವೆ ಎಂದಿನಂತೆ ಇತ್ತು. ಮೆಡಿಕಲ್, ಪೆಟ್ರೋಲ್ ಬಂಕ್ ತೆರೆದಿದ್ದರೂ ಗ್ರಾಹಕರಿರಲಿಲ್ಲ.
ಗ್ರಾಮೀಣ ಭಾಗದಲ್ಲೂ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ರೈತರು ಕೃಷಿಕರು ಹಾಗು ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂತು.