ಮರ ಬಿದ್ದು ಯುವಕ ಸಾವು : ಗೋಣಿಮರೂರು ಗ್ರಾಮದಲ್ಲಿ ಘಟನೆ

18/07/2020

ಸೋಮವಾರಪೇಟೆ ಜು.18 : ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಗೋಣಿಮರೂರು ಸಮೀಪದ ಯಡುಂಡೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮ ನಿವಾಸಿ ಸಂತೋಷ್(36) ಮೃತಪಟ್ಟವರು. ತನ್ನ ಚಿಕ್ಕಪ್ಪ ಚಂದ್ರಪ್ಪ ಅವರ ಕಾಫಿ ತೋಟದಲ್ಲಿ ಗೊಬ್ಬರ ಹಾಕುತ್ತಿರುವ ಸಂದರ್ಭ ಬೆನ್ನಿನ ಮೇಲೆ ಒಣಗಿದ ಮರ ಬಿದ್ದು ತೀವ್ರ ಗಾಯಗೊಂಡಿದ್ದಾರೆ. ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಅವಿವಾಹಿತನಾಗಿದ್ದು, ಚಿಕ್ಕಪ್ಪ ಚಂದ್ರಪ್ಪ ಅವರ ಮನೆಯಲ್ಲೇ ವಾಸವಾಗಿದ್ದರು.