ನೀಟ್ ಕುಂದ್ ಸೇತುವೆ ಮೇಲೆ ವಾಹನಗಳು ಸಂಚರಿಸಬಹುದು

18/07/2020

ಮಡಿಕೇರಿ ಜು.18 : ವಿರಾಜಪೇಟೆ ತಾಲ್ಲೂಕಿನ ಬಿರುನಾಣಿ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು, ನೀಟ್ ಕುಂದ್ ಸೇತುವೆಯ ಕೆಳಗೆ ಸುಮಾರು ಎರಡು ಅಡಿಗೆ ನೀರು ಇಳಿದಿರುವುದರಿಂದ ಸೇತುವೆಯ ಮೇಲೆ ಸಾರ್ವಜನಿಕರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೀಟ್ ಕುಂದ್‍ನ ಸೇತುವೆಯ ಮೇಲೆ ನೀರು ಬಂದಿದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಸೇತುವೆಯ ಮೇಲೆ ಸಂಚಾರವನ್ನು ನಿμÉೀಧಿಸಲಾಗಿತ್ತು.
ಈ ಪ್ರದೇಶಕ್ಕೆ ಬಿರುನಾಣಿಯ ಪೆÇಲೀಸ್‍ಔಟ್ ಪೆÇೀಸ್ಟ್‍ನ ಸಿಬ್ಬಂದಿಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದಲ್ಲಿ ಜಿಲ್ಲಾಡಳಿತದ ವತಿಯಿಂದ ಪರಿಹಾರ ಕಾರ್ಯಾಚರಣೆ ತಂಡವನ್ನು ತಕ್ಷಣವೇ ಕಳುಹಿಸಲಾಗುವುದು. ಆದ್ದರಿಂದ ಆ ಭಾಗದ ಸಾರ್ವಜನಿಕರು ಯಾವುದೇ ಭಯ ಅಥವಾ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.