ಕುಶಾಲನಗರ ಹಳೆಯ ಸೇತುವೆ ನಿರ್ವಹಣೆ
19/07/2020

ಮಡಿಕೇರಿ ಜು.19 : ಕುಶಾಲನಗರ-ಕೊಪ್ಪ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡಿರುವ ಪುರಾತನ ಸೇತುವೆಯ ನಿರ್ವಹಣೆ ಕಾರ್ಯವನ್ನು ಸ್ಥಳೀಯ ಕಾವೇರಿ ನದಿ ಪ್ರವಾಹ ಸಂತ್ರಸ್ತರ ವೇದಿಕೆ ಪ್ರಮುಖರು ನಡೆಸಿದರು. ಬ್ರಿಟಿಷರ ಕಾಲದ ಸುಮಾರು 175 ವರ್ಷಕ್ಕಿಂತಲೂ ಹಳೆಯ ಸೇತುವೆಯ ಮೇಲೆ ಮತ್ತು ಎರಡೂ ಕಡೆಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಇವುಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು.
ಕಾವೇರಿ ನದಿ ಪ್ರವಾಹ ಸಂತ್ರಸ್ಥರ ವೇದಿಕೆ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯದಲ್ಲಿ ಪ್ರಮುಖರಾದ ತೋರೇರ ಉದಯಕುಮಾರ್, ಕೊಡಗನ ಹರ್ಷ, ಪಳಂಗೋಟು ವಿನಯ್ ಕಾರ್ಯಪ್ಪ ಮತ್ತಿತರರು ಹಾಜರಿದ್ದರು.