ಹಾರಂಗಿ ಒಳಹರಿವಿನ ಪ್ರಮಾಣ ಕ್ಷೀಣ

19/07/2020

ಮಡಿಕೇರಿ ಜು.19 : ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕ್ಷೀಣಿಸಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಿದ್ದು ನದಿಗೆ 4104 ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗುತ್ತಿದೆ. ಜಲಾಶಯಕ್ಕೆ ಪ್ರಸಕ್ತ 5056 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು ಅಣೆಕಟ್ಟೆಯ ನೀರಿನ ಮಟ್ಟ 2853.53 ಅಡಿಗಳಷ್ಟಿದೆ. ಇದುವರೆಗೆ ಈ ಸಾಲಿನಲ್ಲಿ ಜಲಾಶಯಕ್ಕೆ ಒಟ್ಟು 4.50 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು, ನದಿಗೆ 0.8 ಟಿಎಂಸಿ ಪ್ರಮಾಣದ ನೀರು ಹರಿಸಲಾಗಿದೆ.