ಸೇನೆಯನ್ನು ಹಿಂಪಡೆಯದ ಚೀನಾ

July 20, 2020

ನವದೆಹಲಿ ಜು.20 : ಈಶಾನ್ಯ ಲಡಾಖ್ ನಲ್ಲಿ ಘರ್ಷಣೆಗೆ ಕಾರಣವಾಗಿದ್ದ ಪ್ರದೇಶದಿಂದ ಸೇನಾ ಸಿಬ್ಬಂದಿಗಳನ್ನು ಹಿಂಪಡೆಯುವುದಕ್ಕೆ ಭಾರತ-ಚೀನಾ ಮಾತುಕತೆ ವೇಳೆ ಪರಸ್ಪರ ಒಪ್ಪಿಗೆ ಸೂಚಿಸಿದ್ದವು. ಆದರೆ ಚೀನಾ ಮಾತ್ರ ಮಾತುಕತೆಯ ಒಪ್ಪಂದವನ್ನು ಪಾಲಿಸದೇ ಮೊಂಡಾಟ ಪ್ರಾರಂಭಿಸಿದೆ.
ಎಲ್‍ಎಸಿಯಿಂದ ಚೀನಾ ಸಿಬ್ಬಂದಿಗಳು ವಾಪಸ್ ಆಗಿಲ್ಲ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಪಿಎಲ್‍ಎ ಸೇನಾ ಸಿಬ್ಬಂದಿಗಳು ಮಾತುಕತೆಗೆ ಬದ್ಧವಾಗಿರದೇ ಇರುವುದನ್ನು ಗಮನಿಸಿರುವ ಭಾರತ, ಸಿಬ್ಬಂದಿಗಳ ಹಿಂತೆಗೆತ ಪ್ರಕ್ರಿಯೆ ಸಂಕೀರ್ಣವಾದದ್ದಾಗಿದ್ದು, ನಿರಂತರ ಪರಿಶೀಲನೆ ಅಗತ್ಯವಿದೆ ಎಂಬ ನಿರ್ಧಾರಕ್ಕೆ ಭಾರತ ಬಂದಿದೆ.
ಚೀನಾ ಸಿಬ್ಬಂದಿಗಳು ಒಂದಷ್ಟು ದೂರ ವಾಪಸ್ ಹೋದಂತೆ ಮಾಡಿ, ಮತ್ತೆ ವಾಪಸ್ಸಾಗುತ್ತಾರೆ. ಆದ್ದರಿಂದ ಈ ಭಾಗದಲ್ಲಿ ಸಭೆ ನಡೆಯುವಾಗ ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಸೇನೆ ಅಭಿಪ್ರಾಯಪಟ್ಟಿರುವುದನ್ನು ಐಎಎನ್‍ಎಸ್ ವರದಿ ಮಾಡಿದೆ.
ಚೀನಾ ಸಿಬ್ಬಂದಿಗಳು ಪ್ಯಾಂಗಾಂಗ್ ಲೇಕ್ ನಲ್ಲಿ 2 ಕಿ.ಮೀ ಹಿಂದೆ ಸರಿದಿದ್ದರೆ ಫಿಂಗರ್ 4 ನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಆದರೆ ಚೀನಾದ ಸೇನಾ ಸಿಬ್ಬಂದಿಗಳ ಪೈಕಿ ರಿಡ್ಜ್ ಲೈನ್ ನಲ್ಲಿ ಇನ್ನೂ ಕೆಲವರಿದ್ದಾರೆ. ಈ ಬೆಳವಣಿಗೆ ಭಾರತದ ನಿಯಂತ್ರಣದಲ್ಲೇ ಇರುವ ಫಿಂಗರ್ 4 ನಲ್ಲಿ ಚೀನಾ ಕ್ಯಾಂಪ್ ಮಾಡಿತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.

error: Content is protected !!