7 ಫಾರ್ಮಾ ಸಂಸ್ಥೆಗಳ ಪೈಪೋಟಿ

20/07/2020

ನವದೆಹಲಿ ಜು.20 : ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಲು ಜಾಗತಿಕವಾಗಿ ಫಾರ್ಮಾ ಸಂಸ್ಥೆಗಳು ಯತ್ನಿಸುತ್ತಿದ್ದು, ಭಾರತದ 7 ಫಾರ್ಮಾ ಸಂಸ್ಥೆಗಳೂ ಸಹ ಪೈಪೋಟಿಯಲ್ಲಿವೆ.
ಜಾಗತಿಕ ಮಟ್ಟದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಭಾರತ್ ಬಯೋಟೆಕ್, ಸೆರಮ್ ಇನ್ಸ್ಟಿಟ್ಯೂಟ್, ಝೈಡಸ್ ಕ್ಯಾಡಿಲಾ, ಪ್ಯಾನೇಸಿಯಾ ಬಯೋಟೆಕ್, ಇಂಡಿಯನ್ ಇಮ್ಯುನೊಲಾಜಿಕಲ್ಸ್, ಮೈನ್ವಾಕ್ಸ್ ಹಾಗೂ ಬಯೋಲಾಜಿಕಲ್ ಇ ಮುಂತಾದ ಭಾರತೀಯ ಫಾರ್ಮಾ ಸಂಸ್ಥೆಗಳು ಕೊರೋನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ.
ಸಾಮಾನ್ಯವಾಗಿ ಯಾವುದೇ ಲಸಿಕೆಯ ಪರೀಕ್ಷೆಗೆ ಒಂದು ವರ್ಷ ಸಮಯಾವಕಾಶ ಹಾಗೂ ಹೆಚ್ಚುವರಿ ಸಮಯ ಅದನ್ನ ಬೃಹತ್ ಪ್ರಮಾಣದಲ್ಲಿ ತಯಾರಿಸಲು ಬೇಕಾಗುತ್ತದೆ. ಆದರೆ ಈಗ ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಫಾರ್ಮಾ ಸಂಸ್ಥೆಗಳು ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿವೆ.