ಮೈಸೂರಿನಲ್ಲಿ ಸಾವಿನ ಪ್ರಮಾಣ ಹೆಚ್ಚು

20/07/2020

ಮೈಸೂರು ಜು.20 : ಕೊರೋನಾ ವೈರಸ್ ವಿರುದ್ಧ ದಿಟ್ಟ ಕ್ರಮಗಳನ್ನು ಕೈಗೊಂಡು ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಿದ್ದ ಮೈಸೂರಿನಲ್ಲಿ ಇದೀಗ ಮತ್ತೆ ಸೋಂಕಿನ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಮೈಸೂರಿ ನಗರದಲ್ಲಿ ಇದೀಗ ಕೊರೋನಾ ಸಾವಿನ ಪ್ರಮಾಣ ಕರ್ನಾಟಕಕ್ಕಿಂತಲೂ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 59ಕ್ಕೆ ಏರಿಕೆಯಾಗಿದ್ದು, ಇದರೊಂದಿಗೆ ನಗರದಲ್ಲಿ ಸಾವಿನ ಪ್ರಮಾಣ ಶೇ.4ಕ್ಕೆ ಹೆಚ್ಚಾಗಿದೆÉ. ಈ ಶೇಕಡಾವಾರು ರಾಜ್ಯದ ಸಾವಿನ ಸರಾಸರಿಗಿಂತಲೂ ದುಪ್ಪಟ್ಟಾಗಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.2.1ರಷ್ಟಿದ್ದರೆ, ಮೈಸೂರಿನಲ್ಲಿ ಶೇ.4ರಷ್ಟಿದೆ.
ಮೈಸೂರಿನಲ್ಲಿ ಈ ವರೆಗೂ 1514 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, 575 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಳೆದ ಕೆಲ ವಾರಗಳಲ್ಲಿ ಮೈಸೂರಿನಲ್ಲಿ 800ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಶೇ.39ಕ್ಕೆ ಇಳಿಕೆಯಾಗಿದೆ.