ಸೋಮವಾರಪೇಟೆಯಲ್ಲಿ ಕೊರೋನಾ ವಾರಿಯರ್ಸ್‌ಗೆ ಹಾಗೂ ಸಾರ್ವಜನಿಕರಿಗೆ ಆಯುರ್ವೇದ ಮಾತ್ರೆಗಳ ವಿತರಣೆ

July 20, 2020

ಮಡಿಕೇರಿ ಜು. 20 : ಸೋಮವಾರಪೇಟೆಯಲ್ಲಿ ಕೊರೋನಾ ವಾರಿಯರ್ಸ್ ಹಾಗೂ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿಯುಳ್ಳ ಹೋಮಿಯೋಪತಿ ಮತ್ತು ಆಯುರ್ವೇದ ಮಾತ್ರೆಗಳನ್ನು ಶಾಸಕ ಅಪ್ಪಚ್ಚು ರಂಜನ್ ಅವರ ಕಚೇರಿಯಲ್ಲಿ ವಿತರಿಸಲಾಯಿತು.
ಮಾತ್ರೆಗಳನ್ನು ವಿತರಿಸಿದ ಮಾತನಾಡಿದ ಶಾಸಕರು, ಕೋವಿಡ್-19 ಸೋಂಕಿನ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಬೇಕು. ಸೋಂಕು ಹರಡುವುದನ್ನು ತಡೆಯುವುದಕ್ಕೇ ಅವಶ್ಯಕವಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅನವಶ್ಯಕ ಸುತ್ತಾಟ ಬೇಡ. ಮಾಸ್ಕ್ ಹಾಕದೆ ತಿರುಗಾಡ ಬಾರದು ಎಂದು ಹೇಳಿದರು.
ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಸ್ಮಿತಾ ಮಾತನಾಡಿ, ಪ್ರತಿಯೋಬ್ಬರು ರೋಗ ಬರದಂತೆ ಎಚ್ಚರ ವಹಿಸುವಂತೆ ಸಲಹೆ ನೀಡಿದರು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಯನ್ನು ಬೆಳಿಗ್ಗೆ, ರಾತ್ರಿ, ಊಟವಾದ ನಂತರ ಎರಡೆರಡು ಮಾತ್ರೆಗಳನ್ನು ಇಪ್ಪತ್ತು ದಿನಗಳು ಸೇವಿಸಬೇಕು ಎಂದು ಹೇಳಿದರು.

error: Content is protected !!