ಕೊರೋನಾ ಜಾಗೃತಿ ಸಮಿತಿ ಸಭೆ : ಅಧಿಕಾರಿಗಳಿಂದ ಆನ್‍ಲೈನ್ ಮೂಲಕ ಮಾಹಿತಿ

20/07/2020

ಮಡಿಕೇರಿ ಜು. 20 : ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ 11 ವಾರ್ಡ್‍ಗಳ ಕರೊನಾ ಜಾಗೃತಿ ಸಮಿತಿ ಸಭೆ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಪೌರಡಳಿತ ಇಲಾಖೆ ಅಧಿಕಾರಿಗಳು ಆನ್‍ಲೈನ್ ಮೂಲಕ ತರಬೇತಿ ನೀಡಿದರು. ವಾರ್ಡ್‍ಗಳಲ್ಲಿ ಸ್ವಚ್ಚತೆಯ ಬಗ್ಗೆ ಗಮನ ಹರಿಸಬೇಕು. ಭಿತ್ತಿ ಪತ್ರಗಳ ಮೂಲಕ ಕೋವಿಡ್-19 ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು, ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ನಿಯಮಗಳ ಬಗ್ಗೆ ಸೂಕ್ತ ತಿಳುವಳಿಗೆ ನೀಡಬೇಕು ಎಂದು ಮಾಹಿತಿ ನೀಡಿದರು.
ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಉದಯ ಕುಮಾರ್ ಇದ್ದರು.