ಕೊರೋನಾ ಅಂತ್ಯ ಸಂಸ್ಕಾರ : ಕಾರ್ಯಾಚರಣೆ ವಿಧಾನ ಅನುಸರಿಸಲು ಜಿಲ್ಲಾ ವಕ್ಪ್ ಮಂಡಳಿ ಮನವಿ

20/07/2020

ಮಡಿಕೇರಿ ಜು.20 : ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಮೃತರಾದ ಮುಸ್ಲಿಂರ ಮೃತ ದೇಹಗಳನ್ನು ಅಂತ್ಯ ಸಂಸ್ಕಾರ (ದಫನ) ಸಮಯದಲ್ಲಿ ಪ್ರಮಾಣಿತ ಕಾರ್ಯಾಚಾರಣೆ ವಿಧಾನವನ್ನು ಅನುಸರಿಸುವ ಕುರಿತು.
ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಂರ ಮೃತ ದೇಹಗಳನ್ನು ಅಂತ್ಯ ಸಂಸ್ಕಾರ (ದಫನ್) ಮಾಡುವ ಸಮಯದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಸೂಚಿಸಿದ ಮಾರ್ಗ ಸೂಚಿಗಳನ್ವಯ ಗೌರವಯುತವಾಗಿ ಮಾಡಲು ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿಯವರು ಸಹಕರಿಸಬೇಕೆಂದು ಈ ಮೂಲಕ ತಿಳಿಯ ಪಡಿಸಲಾಗಿದೆ.
ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧೀನದಲ್ಲಿರುವ ನೋಂದಾಯಿತ ಹಾಗೂ ನೋಂದಾಯಿಸದೆ ಇರುವ ಎಲ್ಲಾ ಖಬರಸ್ಥಾನಗಳ ಮುತವಲ್ಲಿಯವರು, ಆಡಳಿತ ಮಂಡಳಿಯವರು ರಾಜ್ಯ ವಕ್ಫ್ ಮಂಡಳಿಯಿಂದ ಸೂಚಿಸಿದ ಮಾರ್ಗ ಸೂಚಿಗಳನ್ವಯ ಗೊತ್ತುಪಡಿಸಿದ ನೋಡಲ್ ಅಧಿಕಾರಿಗಳೊಂದಿಗೆ ಸಹಕರಿಸಿ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಂ ಮೃತರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ದಫನ ಮಾಡಲು ಸಹಕರಿಸಬೇಕು.
ಆಡಳಿತ ಮಂಡಳಿಯವರು ಈ ಕಾರ್ಯದಲ್ಲಿ ಸಹಕರಿಸಲು ನಿರಾಕರಿಸಿದಲ್ಲಿ ಮೃತರಿಗೆ ಮಾಡಿದ ಅಪಮಾನವೆಂದು ಪರಿಗಣಿಸಿ, ಅಂತಹ ಸಂಸ್ಥೆಗಳ ಮುತವಲ್ಲಿ, ಆಡಳಿತ ಮಂಡಳಿ, ಅಧ್ಯಕ್ಷರು/ ಕಾರ್ಯದರ್ಶಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದಲ್ಲದೆ ವಕ್ಫ್ ಕಾಯ್ದೆ 1995ರ ಪ್ರಕಾರ ಹಾಗೂ ಭಾರತೀಯ ದಂಡ ಸಂಹಿತೆಯಂತೆ ಕ್ರಮ ಜರುಗಿಸಲಾಗುವುದು ಎಂದು ಕೊಡಗು ಜಿಲ್ಲಾ ವಕ್ಪ್ ಸಲಹಾ ಸಮಿತಿಯ ವಕ್ಫ್ ಅಧಿಕಾರಿ ಅವರು ತಿಳಿಸಿದ್ದಾರೆ.