ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

20/07/2020

ಮಡಿಕೇರಿ ಜು.20 : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ(ಜೂನಿಯರ್ ಕಾಲೇಜು ಆವರಣ) ನಲ್ಲಿ 2020-21 ನೇ ಸಾಲಿಗೆ ಬಿ.ಎ (ಹೆಚ್‍ಇಪಿ) ಬಿ.ಎ (ಹೆಚ್‍ಇಎಸ್, ಎಚ್‍ಇಕೆ), ಬಿ.ಕಾಂ, ಬಿಬಿಎ ಕೋರ್ಸುಗಳಿಗೆ ಆನ್‍ಲೈನ್ ಪ್ರವೇಶಾತಿ ಅರ್ಜಿ ಆರಂಭಗೊಂಡಿದೆ. ಅರ್ಹ ವಿದ್ಯಾರ್ಥಿಗಳು ಸೂಕ್ತ ದಾಖಾಲಾತಿಗಳೊಂದಿಗೆ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.
ಕಾಲೇಜಿನಲ್ಲಿ ಸುಸಜ್ಜಿತ ಇ-ಗ್ರಂಥಾಲಯ, ಎನ್‍ಎಸ್‍ಎಸ್., ರೋವರ್ಸ್ ಮತ್ತು ರೇಂಜರ್ಸ್ ಘಟಕ, ಯುವ ಸಬಲೀಕರಣ ಕೇಂದ್ರ, ವಿವಿಧ ವಿದ್ಯಾರ್ಥಿ ವೇತನಗಳು, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿನಿಯರಿಗೆ ಪಾಠ ಶುಲ್ಕದ ವಿನಾಯಿತಿ, ವೃತ್ತಿ ಹಾಗೂ ವ್ಯಕ್ತಿತ್ವ ವಿಕಸನ ಮಾರ್ಗದರ್ಶನ ಹಾಗೂ ಉಚಿತ ಲ್ಯಾಪ್ ಟಾಪ್ ಸೌಲಭ್ಯಗಳನ್ನು ಒಳಗೊಂಡಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ:08272-223913, 8277167074 ಸಂಪರ್ಕಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಕೋರಿದ್ದಾರೆ.