ವಿವಿಧ ಕೊಡವ ಸಮಾಜ, ಸಂಸ್ಥೆಗಳಿಗೆ ದುಡಿ ವಿತರಣೆ

July 20, 2020

ಮಡಿಕೇರಿ ಜು.20 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ವಿವಿಧ ಕೊಡವ ಸಮಾಜ, ಸಂಸ್ಥೆಗಳಿಗೆ ದುಡಿ ನೀಡುವ ಕಾರ್ಯಕ್ರಮ ನಡೆಯಿತು.
ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್ಲರೂ ಕೊಡವ ಭಾಷೆ, ಸಂಸ್ಕøತಿ, ಜನಪದ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಹಕಾರ ನೀಡಬೇಕು ಹಾಗೂ ಅಕಾಡೆಮಿ ನೀಡಿದ ದುಡಿಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ಮಾಡಿದರು.
ಡಾ.ಮೇಚಿರ ಸುಭಾಷ್ ನಾಣಯ್ಯ ಹಾಗೂ ಕುಡಿಯರ ಮುತ್ತಪ್ಪ ಅವರು ಮಾತನಾಡಿದರು. ದುಡಿಯನ್ನು ಪಡೆದುಕೊಂಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ದುಡಿಯನ್ನು ಪಡೆದ ಪ್ರಯುಕ್ತ ಕೊಡವ ಸಾಹಿತ್ಯ ಅಕಾಡಮಿಗೆ ವಂದನೆ ಸಲ್ಲಿಸಿದರು. ಅಕಾಡೆಮಿ ಸದಸ್ಯರಾದ ಮಾಚಿಮಾಡ ಜಾನಕಿ ಹಾಗೂ ಗೌರಮ್ಮ ಮಾದಮ್ಮಯ್ಯ, ಕನ್ನಡ ಸಂಸ್ಕøತಿ ಇಲಾಖೆಯ ಪ್ರಭಾರ ನಿರ್ದೇಶಕರಾದ ಕೆ.ಟಿ.ದರ್ಶನ್ ಇತರರು ಹಾಜರಿದ್ದರು.
15 ಸಂಘ ಸಂಸ್ಥೆಗಳಿಗೆ ದುಡಿಯನ್ನು ನೀಡಲಾಯಿತು. ಬಬ್ಬಿರ ಸರಸ್ವತಿ ಅವರು ಪ್ರಾರ್ಥಿಸಿದರು. ರಿಜಿಸ್ಟ್ರಾರ್ ಎ.ಸಿ.ಗಿರೀಶ ಅವರು ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಪಡಿಞರಂಡ ಪ್ರಭು ಅವರು ವಂದಿಸಿದರು.