ಶಾಂತಳ್ಳಿ ರಸ್ತೆ ಕಾಮಗಾರಿ : 15 ದಿನ ರಸ್ತೆ ಸಂಚಾರ ಬಂದ್

July 20, 2020

ಸೋಮವಾರಪೇಟೆ ಜು.20 : ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿಯ ಸೋಮವಾರಪೇಟೆ ಪಟ್ಟಣದ ವಿವೇಕಾನಂದ ಸರ್ಕಲ್‍ನಿಂದ ಶಾಂತಳ್ಳಿ ರಸ್ತೆಯಲ್ಲಿ ಕಾಂಕ್ರೀಟೀಕರಣ ಕಾಮಗಾರಿ ಪ್ರಾರಂಭವಾಗಿರುವುದರಿಂದ 15 ದಿನಗಳ ಕಾಲ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸರ್ಕಲ್‍ನಿಂದ 500 ಮೀಟರ್ ರಸ್ತೆಯ ಕಾಮಗಾರಿ ನಡೆಯುತ್ತಿರುವುದರಿಂದ. ಜು.21ರಿಂದ ಆ.6ರ ತನಕ ರಸ್ತೆ ಸಂಚಾರವಿರುವುದಿಲ್ಲ. ಶಾಂತಳ್ಳಿ, ಕುಂದಳ್ಳಿ, ಮಲ್ಲಳ್ಳಿ ಹಾಗು ತೋಳೂರುಶೆಟ್ಟಳ್ಳಿ, ಕೂತಿ, ಸಕಲೇಶಪುರ ಕ್ಕೆ ತೆರಳುವವರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಚೌಡ್ಲು, ಆಲೇಕಟ್ಟೆ ರಸ್ತೆ ಹಾಗು ಕಕ್ಕೆಹೊಳೆ, ಹಾನಗಲ್ಲು ಕೆರೆ, ಶೆಟ್ಟಳ್ಳಿ, ಬಿ.ಟಿ.ಸಿ.ಜಿ. ಕಾಲೇಜು ಮೂಲಕ ಪರ್ಯಾಯ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.

error: Content is protected !!