ಹ್ಯೂಮನಿಟಿ ಫಸ್ಟ್ ಇಂಡಿಯಾದಿಂದ ಸ್ವಚ್ಚತಾ ಕಾರ್ಮಿಕರಿಗೆ ಮಾಸ್ಕ್ ಹಾಗೂ ತಂಪು ಪಾನಿಯ ವಿತರಣೆ

21/07/2020

ಮಡಿಕೇರಿ ಜು. 21 : ಹ್ಯೂಮನಿಟಿ ಫಸ್ಟ್ ಇಂಡಿಯಾ ವತಿಯಿಂದ ಮಡಿಕೇರಿ ನಗರಸಭೆಯ ಸ್ವಚ್ಚತಾ ಕಾರ್ಮಿಕರಿಗೆ ಮಾಸ್ಕ್ ಹಾಗೂ ತಂಪು ಪಾನಿಯ ವಿತರಿಸಲಾಯಿತು.

ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಮೊಹಮ್ಮದ್ ಶರೀಫ್, ಕೊರೋನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸ್ವಚ್ಚತಾ ಕಾರ್ಮಿಕರ ಪಾತ್ರದ ಬಗ್ಗೆ ವಿವರಿಸಿ, ಪೌರ ಕಾರ್ಮಿಕರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ 60ಕ್ಕೂ ಹೆಚ್ಚು ಕಾರ್ಮಿಕರಿಗೆ ಮಾಸ್ಕ್ ಹಾಗೂ ಲಘು ಪಾನಿಯದ ವ್ಯವಸ್ಥೆಯನ್ನು ಮಾಡಲಾಯಿತು.

ನಗರ ಸಭೆಯ ಆರೋಗ್ಯ ಅಧಿಕಾರಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.