ಸೋಮವಾರಪೇಟೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಲಿಖಿತ್ ಅಧಿಕಾರ ಸ್ವೀಕಾರ

21/07/2020

ಮಡಿಕೇರಿ ಜು. 21 : ಸೋಮವಾರಪೇಟೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಲಖಿತ್, ಕಾರ್ಯದರ್ಶಿಯಾಗಿ ಜೀವನ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿದರು.
ಸೋಮವಾರಪೇಟೆ ಪಟ್ಟಣದ ಮಹಿಳಾ ಸಮಾಜದಲ್ಲಿ ಹಿಂದಿನ ಸಾಲಿನ ಅಧ್ಯಕ್ಷ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ರೋಟರಿಸಂಸ್ಥೆ ಪದಾಧಿಕಾರಿಗಳಾದ ಪಿ.ಕೆ.ರವಿ, ಹೆಚ್.ಸಿ. ನಾಗೇಶ್, ಲೋಕೇಶ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್‍ನ 2020-21ರ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಇಲ್ಲಿನ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಎಚ್.ಸಿ. ನಾಗೇಶ್ ಪದಗ್ರಹಣ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮಾತನಾಡಿ, ದೇಶದಲ್ಲಿ ಪೊಲಿಯೋ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಸ್ಥೆ, ಈಗ ಪ್ರಪಂಚದಲ್ಲಿ ಕೋವಿಡ್ -19 ಸೋಂಕು ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈ ಜೋಡಿಸಲಾಗುವುದು ಎಂದು ಹೇಳಿದರು.
ಇಂದು ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವಿದ್ದು, ಜನರ ಸೇವೆಗೆ ಸಂಸ್ಥೆ ಹಿಂದೇಟು ಹಾಕದೆ, ಸಧಾ ಮುಂದಿರಬೇಕು. ನಿಗಧಿತ ಅವಧಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕೆಂದರು.
ಸಂಸ್ಥೆಯ ಜಿಲ್ಲಾ ಸಹಾಯಕ ಗವರ್ನರ್ ಪಿ.ಕೆ. ರವಿ ಮಾತನಾಡಿ, ಕರೊನಾದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರಲ್ಲಿ ಅರಿವು ಮೂಡಿಸು ಕಾರ್ಯವನ್ನು ಸಂಸ್ಥೆ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 5 ಲಕ್ಷ ಸಸಿ ನೆಡುವ ಕಾರ್ಯಕ್ರಮವಿದ್ದು, ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ. ನೀರು, ನೈರ್ಮಲ್ಯ ಸೇರಿದಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಪಿ.ರಮೇಶ್ ವಹಿಸಿದ್ದರು. ವೇದಿಕೆಯಲ್ಲಿ ನೂತನ ಎಂ.ಡಿ. ಲಿಖಿತ್. ಕಾರ್ಯದರ್ಶಿ ಕೆ.ಡಿ. ಜೀವನ್‍ಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಎಚ್.ಸಿ. ಲೋಕೇಶ್ ಉಪಸ್ಥಿತರಿದ್ದರು. ಇದೇ ಸಂದರ್ಭ ಪದಾಧಿಕಾರಿಗಳಾದ ಎಂ.ಎಂ. ಪ್ರಕಾಶ್‍ಕುಮಾರ್, ಜಿ.ಡಿ. ನವೀನ್, ಡಿ.ಪಿ. ಧರ್ಮಪ್ಪ, ಎನ್.ಟಿ. ವಸಂತ್, ಡಿ.ಪಿ. ಪ್ರೀತಮ್, ಡಾ|| ರಾಖೇಶ್ ಪಟೇಲ್, ಎಂ.ಕೆ. ಚಂಗಪ್ಪ, ಬಿ.ಸಿ. ಅಭಿನಂದನ್, ಸಿ.ಆರ್. ಪ್ರದೀಪ್, ಪಿ. ನಾಗೇಶ್, ಎ.ಪಿ. ವೀರರಾಜು, ಕೆ.ಡಿ. ಬಿದ್ದಪ್ಪ. ಬಿ.ಬಿ. ಸಂದೀಪ ಅಧಿಕಾರ ಸ್ವೀಕರಿಸಿದರು.