ಕೊಡಗು ಕಾಂಗ್ರೆಸ್ ಸಭೆ : “ಆರೋಗ್ಯ ಅಭಯ ಹಸ್ತ” : ಕೆಪಿಸಿಸಿಯಿಂದ ಕೋವಿಡ್ ಪ್ರತಿನಿಧಿಗೆ ರೂ.2ಲಕ್ಷ ವಿಮೆ

21/07/2020

ಮಡಿಕೇರಿ ಜು.21 : ಕೊರೋನಾ ಸಂದಿಗ್ಧ ಪರಿಸ್ಥಿತಿಯ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆರಂಭಿಸಿರುವ “ಆರೋಗ್ಯ ಅಭಯ ಹಸ್ತ” ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಂತರ್ಜಾಲ ಝೂಮ್ ಸಭೆ ನಡೆಯಿತು.
ತಮ್ಮ ಹಾಗೂ ಬ್ಲಾಕ್ ಅಧ್ಯಕ್ಷರುಗಳ ನೇತೃತ್ವದಲ್ಲಿ ಪಂಚಾಯಿತಿ ಮಟ್ಟದಲ್ಲಿ “ಆರೋಗ್ಯ ಅಭಯ ಹಸ್ತ” ತಂಡ ರಚಿಸುವ ಬಗ್ಗೆ ಜಿಲ್ಲಾಧ್ಯಕ್ಷರು ಮಾಹಿತಿ ನೀಡಿದರು. ಕೋವಿಡ್ ನಿರ್ವಹಣೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತೀ ಕಾಂಗ್ರೆಸ್ ಪ್ರತಿನಿಧಿಯ ಹೆಸರಿನಲ್ಲಿ ಕೆಪಿಸಿಸಿ ವತಿಯಿಂದಲೇ ರೂ.2 ಲಕ್ಷಗಳ ವಿಮೆಯನ್ನು ಮಾಡಿಸಲಾಗುತ್ತದೆ. ಪ್ರತಿ ಪಂಚಾಯಿತಿಗೆ ಇಬ್ಬರು ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುವುದು. ಇವರುಗಳಿಗೆ ಅವಶ್ಯಕವಿರುವ ಪಿಪಿಇ ಕಿಟ್, ಸ್ಯಾನಿಟೈಸರ್, ಫೇಸ್ ಮಾಸ್ಕ್, ತರ್ಮಲ್ ಸ್ಕ್ಯಾನರ್ ಮತ್ತಿತರ ಆರೋಗ್ಯ ಪೂರಕ ಪರಿಕರಗಳನ್ನು ಕೆಪಿಸಿಸಿ ಮೂಲಕ ನೀಡಲಾಗುವುದು ಎಂದು ತಿಳಿಸಿದರು.
ನಾಡು ಕೊರೋನಾ ಸಂಕಷ್ಟದಲ್ಲಿರುವುದರಿಂದ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬರು ಜನರ ಸಂಕಷ್ಟದಲ್ಲಿ ಭಾಗಿಯಾಗಿ ಧೈರ್ಯ ಮೂಡಿಸುವ ಕಾರ್ಯ ಮಾಡಬೇಕೆಂದು ಮಂಜುನಾಥ್ ಕುಮಾರ್ ಕರೆ ನೀಡಿದರು.
ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿಯಾಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಂಜುಳ ರಾಜ್, ಕೆಪಿಸಿಸಿ ನಿಯೋಜಿತ ಬ್ಲಾಕ್ ಸಂಯೋಜಕರುಗಳಾದ ಜಿ.ಬಿ.ಜಾನ್, ಪಿ.ರಾಜು, ಹೇಮನಾಥ್ ಶೆಟ್ಟಿ, ವೆಂಕಪ್ಪ ಗೌಡ, ಎಡ್ವಿನ್ ರಿಚರ್ಡ್, ಪ್ರದೀಪ್ ರೈ ಪಾಂಬಾರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನವೀನ್, ಪಟ್ಟಡ ರಂಜಿ ಪೂಣಚ್ಚ, ಬಿ.ಎಸ್.ಅನಂತ್ ಕುಮಾರ್, ವೈದ್ಯ ಘಟಕದ ಜಿಲ್ಲಾಧ್ಯಕ್ಷÀ ಉದಯ್ ಕುಮಾರ್, ಸಾಮಾಜಿಕ ಜಾಲತಾಣದ ಮೈಸೂರು ವಿಭಾಗ ಅಧ್ಯಕ್ಷ ಐ.ಜಿ.ಚಿನ್ನಪ್ಪ, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು, ಮಡಿಕೇರಿ ಹಾಗೂ ವಿರಾಜಪೇಟೆ ಕ್ಷೇತ್ರದ ಸಾಮಾಜಿಕ ಜಾಲತಾಣದ ಅಧ್ಯಕ್ಷರುಗಳಾದ ಆರ್.ಪಿ.ಚಂದ್ರಶೇಖರ್, ಲೋಹಿತ್ ಗೌಡ, ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಬುಟ್ಟಿಯಂಡ ಗಪ್ಪಣ್ಣ, ಬಶೀರ್ ಚೇರಂಬಾಣೆ, ಯುವ ಕಾಂಗ್ರೆಸ್ಸಿನ ಪಟ್ಟಡ ರಕ್ಷಿತ್ ಪೂಣಚ್ಚ, ಮಿಲನ್ ಪೊನ್ನಂಪೇಟೆ ಮತ್ತಿತರರು ಸಭೆಯಲ್ಲಿ ಹಾಜರಿದ್ದು “ಆರೋಗ್ಯ ಅಭಯ ಹಸ್ತ” ಪರ ಬೆಂಬಲ ಸೂಚಿಸಿದರು.