ಬ್ಯಾಂಕ್ ಆಫ್ ಬರೋಡ ಗದ್ದೆಹಳ್ಳ ಶಾಖೆಯಲ್ಲಿ ಸಯಾಜಿರಾವ್ ಗಾಯಕ್‍ವಾಡ್.ತ್ರಿ ದಿನಾಚರಣೆ

21/07/2020

ಸುಂಟಿಕೊಪ್ಪ ಜು.21 : ಬ್ಯಾಂಕ್ ಆಫ್ ಬರೋಡ ಗದ್ದೆಹಳ್ಳ ಶಾಖೆಯ ವತಿಯಿಂದ ಬ್ಯಾಂಕಿನ ಸಂಸ್ಥಾಪಕ ಸಯಾಜಿರಾವ್ ಗಾಯಕ್‍ವಾಡ್.ತ್ರಿ ಅವರ ದಿನವನ್ನು ಆಚರಿಸಲಾಯಿತು.
ಈ ಸಂದರ್ಭ ಬ್ಯಾಂಕಿನ ಗ್ರಾಹಕರಿಗೆ ಸಿಹಿಯನ್ನು ಹಂಚಲಾಯಿತು. ನಂತರ ಮಾತನಾಡಿದ ಬ್ಯಾಂಕಿನ ವ್ಯವಸ್ಥಾಪಕ ಎಸ್.ಆರ್.ಕೆ.ರೆಡ್ಡಿ ಬ್ಯಾಂಕ್ ಆಫ್ ಬರೋಡ ದೇಶ ವಿದೇಶಗಳಲ್ಲಿ ಕಾರ್ಯ ಉತ್ತಮ ನಿರ್ವಹಿಸುತ್ತಿದ್ದು ಗ್ರಾಹಕರಿಗೆÀ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಗ್ರಾಹಕರಿಗೆ ಎಲ್ಲಾ ಸಾಲ ಸೌಲಭ್ಯವನ್ನು ನೀಡುತ್ತಿದೆ ಎಂದರು.
ಈ ಸಂದರ್ಭ ಬ್ಯಾಂಕಿನ ಅಧಿಕಾರಿಗಳಾದ ಜಯ ಜಿ. ಹೆಗ್ಡೆ, ತೇಜೇಸ್ವರಿ ಸತೀಶ್ ರವಿ ಸಿಬ್ಬಂದಿ ಸಂತೋಷ್ ಹಾಜರಿದ್ದರು.