ಕೊಡಗಿನಲ್ಲಿ ಕೊರೊನಾ ಸಂಕಷ್ಟದಿಂದ 210 ಮಂದಿ ಪಾರು

July 21, 2020

ಮಡಿಕೇರಿ ಜು.21 : ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಒಂದು ಪ್ರಕರಣವಷ್ಟೆ ಇಂದು ದಾಖಲಾಗಿದ್ದು, ಒಟ್ಟು 282 ಪ್ರಕರಣಗಳಲ್ಲಿ 210 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದು ವಿರಾಜಪೇಟೆ ತಾಲ್ಲೂಕಿನ ತೊತ್ತೇರಿ ಗ್ರಾಮದ ಸೋಂಕಿತ ಪ್ರಕರಣದ ಸಂಪರ್ಕಕ್ಕೆ ಬಂದಿದ್ದ 63 ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 282 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿನ 5 ಪ್ರಕರಣಗಳಲ್ಲಿ ಸಾವು ಸಂಭವಿಸಿದೆ. ಸೋಂಕಿತ ಪ್ರಕರಣಗಳಿಗೆ ಸಮಬಂಧಿಸಿದಂತೆ ಒಟ್ಟು 108 ನಿರ್ಬಂಧಿತ ಪ್ರದೇಶಗಳನ್ನು ತೆರೆಯಲಾಗಿದೆ.
ನಿರ್ಬಂಧಿತ ಪ್ರದೇಶಗಳಾಗಿದ್ದ ಸೋಮವಾರಪೇಟೆ ತಾಲ್ಲೂಕಿನ ಬಳಗುಂದ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಸತಿ ಗೃಹ, ಕರಿಕೆಯ ಎಳ್ಳುಕೊಚ್ಚಿ, ತಿತಿಮತಿ, ಕರಿಕೆ ಮತ್ತು ಶ್ರೀಮಂಗಲದ ಆರೋಗ್ಯ ಇಲಾಖಾ ವಸತಿ ಗೃಹಗಳ ನಿರ್ಬಂಧವÀನ್ನು ತೆಗೆದು ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

error: Content is protected !!