ಸೋಮವಾರಪೇಟೆಯಲ್ಲಿ ಕೊರೊನಾ ಜಾಗೃತಿ ಸಭೆ : ಶಾಸಕರೆದುರೇ ನಿಯಮ ಉಲ್ಲಂಘಿಸಿದ ಅಧಿಕಾರಿಗಳು

ಸೋಮವಾರಪೇಟೆ ಜು.21 : ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕುರಿತು ಮಂಗಳವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅಧಿಕಾರಿಗಳೇ ನಿಯಮ ಪಾಲನೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದರು.
ಶಾಸಕ ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಕರೆಯಲಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅಧಿಕಾರಿಗಳೇ ಸಾಮಾಜಿಕ ಅಂತರ ಮರೆತರು. ಸಭೆಯ ಗಂಭೀರತೆಯನ್ನು ಮರೆತ ಕೆಲವು ಅಧಿಕಾರಿಗಳು ಮಾಸ್ಕ್‍ಗಳನ್ನು ಗದ್ದಕ್ಕೆ ಹಾಕಿಕೊಂಡರೆ, ಇನ್ನು ಕೆಲವು ಅಧಿಕಾರಿಗಳು ವ್ಯಾಟ್ಸಾಪ್ ನಲ್ಲಿ ತಲ್ಲೀನರಾಗಿದ್ದರು. ಶಾಸಕ ಅಪ್ಪಚ್ಚು ರಂಜನ್ ಮಾಸ್ಕ್ ಧರಿಸಿ ಮಾತನಾಡುವಂತೆ ಸೂಚಿಸಿದರೂ, ಅಧಿಕಾರಿಗಳು ಅದನ್ನು ಪಾಲಿಸುವ ಗೋಜಿಗೂ ಹೋಗಲಿಲ್ಲ.
ಪ್ರತಿಯೊಂದು ಪಂಚಾಯಿಗಳು ಕಸ ವಿಲೇವಾರಿ, ನ್ಯೆರ್ಮಲೀಕರಣ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಶುಚಿತ್ವದಲ್ಲಿ ಗಮನಾರ್ಹವಾಗಿ ಸಾಧನೆ ಮಾಡುವ ಪಂಚಾಯಿಗಳಿಗೆÉ ವ್ಯೆಯಕ್ತಿಕವಾಗಿ ನಾನು ಬಹುಮಾನ ನೀಡುತ್ತೇನೆ ಎಂದರು.
ವೇದಿಕೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಹೆಚ್.ಎನ್.ತಂಗಮ್ಮ, ತಹಶೀಲ್ದಾರ್ ಗೋವಿಂದರಾಜು, ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಉಪಸ್ಥಿತರಿದ್ದರು.